ಬೆಳ್ತಂಗಡಿ: ಇಲ್ಲಿಯ ಮೂರು ಮಾರ್ಗದ ಬಳಿಯ ಶ್ರೀ ಗಣೇಶ್ ಹೋಟೆಲ್ ಹಾಗೂ ಪಕ್ಕದ ಮೊಬೈಲ್ ಶಾಪ್‌ಗೆ ನುಗ್ಗಿದ ಕಳ್ಳರು ನಗದು ಸಹಿತ ಸೊತ್ತುಗಳನ್ನು ಕಳವುಗೈದ ಘಟನೆ ಜೂ.6ರಂದು ವರದಿಯಾಗಿದೆ.
ಜೂ.5ರಂದು ತಡ ರಾತ್ರಿ ಬೆಳ್ತಂಗಡಿ ಮೂರು ಮಾರ್ಗದ ಬಳಿಯ ದಿವಾಕರ ಪ್ರಭು ಅವರ ಮಾಲಕತ್ವದ ಶ್ರೀ ಗಣೇಶ್‌ಹೋಟೆಲ್‌ನ ಮಾಡಿನ ಹಂಚನ್ನು ತೆಗೆದು ಒಳನುಗ್ಗಿದ ಕಳ್ಳರು ಹೋಟೆಲ್‌ನ ಒಳಗಿದ್ದ ನಗದು ಸಹಿತ ಸಿ.ಸಿ ಕ್ಯಾಮರಾದ ಡಿ.ವಿ.ಆರ್‌ನ್ನು ಕಳವುಗೈದಿದ್ದಾರೆ. ಜೊತೆಗೆ ಹೋಟೆಲ್‌ಗೆ ತಾಗಿಕೊಂಡಿರುವ ನಕ್ಷತ್ರ ಮೊಬೈಲ್‌ನ ಒಳನುಗ್ಗಿ ನಾಲ್ಕು ಹೊಸ ಮೊಬೈಲ್ ಕಳವು ನಡೆಸಿರುವುದಾಗಿ ವರದಿಯಾಗಿದೆ. ಕಳ್ಳ ಮಾಡಿನ ಮೂರು ಹಂಚನ್ನು ತೆಗೆದು ಒಳನುಗ್ಗಿರುವುದು ಕಂಡು ಬಂದಿದೆ. ಮುಖ್ಯ ರಸ್ತೆಗೆ ತಾಗಿಕೊಂಡಿರುವ ಈ ಕಟ್ಟಡದಲ್ಲಿ ನಡೆದಿರುವ ಕಳವು ಎಲ್ಲರಿಗೂ ಅಚ್ಚರಿಯನ್ನು ತಂದಿದೆ.
ಹೋಟೆಲ್‌ಗೆ ತಾಗಿಕೊಂಡಿರುವ ನಕ್ಷತ್ರ ಮೊಬೈಲ್‌ನ ಒಳನುಗ್ಗಿ ನಾಲ್ಕು ಹೊಸ ಮೊಬೈಲ್ ಕಳವು ನಡೆಸುತ್ತಿರುವ ವರದಿಯಾಗಿದೆ. ಕಳ್ಳ ಮಾಡಿದ ಮೂರು ಹಂಚನ್ನು ತೆಗೆದು ಒಳನುಗ್ಗಿರುವುದು ಕಂಡು ಬಂದಿದೆ.