ಗ್ರಾಮಾಂತರ ಸುದ್ದಿ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲಮಾಧ್ಯಮ ಶಾಲೆಯಲ್ಲಿಪರಿಸರ ದಿನಾಚರಣೆಯ ಅಂಗವಾಗಿ ಔಷಧ ವನ ನಿರ್ಮಾಣ

ಧಮ೯ಸ್ಥಳ: ಹಿತ್ತಲ ಗಿಡ ಮದ್ದಲ್ಲ ಎಂಬ ಮಾತಿದೆ.ಹಿತ್ತಲಲ್ಲೇ ಅನೇಕ ಔಷಧೀಯ ಗುಣಗಳಿರುವ ಸಸ್ಯಗಳಿದ್ದರೂ ಗುರುತಿಸುವಲ್ಲಿ ವಿಫಲವಾಗಿರುವ ಈ ಸಂದರ್ಭದಲ್ಲಿ ಅದರ ಅರಿವು ಮೂಡಿಸುವುದು

ಅನಿವಾರ್ಯವಾಗಿದೆ.ಹೀಗಾಗಿ ಶ್ರೀ. ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಔಷಧೀಯ ಸಸ್ಯಗಳನ್ನು ಉಳಿಸಿ ಬೆಳೆಸುವ ಸಲುವಾಗಿ ಅದಕ್ಕೊಂದು ವನ ನಿರ್ಮಾಣ ಮಾಡುವ ತನ್ನ ಚಿತ್ತಹರಿಸಿ ವಿಭಿನ್ನ ಪ್ರಯೋಗಕ್ಕೆ ಪರಿಸರ ದಿನಾಚರಣೆಯ ಅಂಗವಾಗಿ ನಾಂದಿ ಹಾಡಿತು. ಶಾಲಾ ವಿದ್ಯಾರ್ಥಿಗಳು ತಾವು ಗುರುತಿಸಿ ಔಷಧೀಯ ಸಸ್ಯಗಳನ್ನು ಶಾಲೆಯಲ್ಲಿ ನೆಟ್ಟು ಅದರ ಉಪಯೋಗ ತಾವೇ ವಿವರಿಸಿ

 

ಹೇಳಿದರು.ಶಾಲೆಯ ಪರಿಸರ ಸಂಘದ ಜವಾಬ್ದಾರಿ ಹೊತ್ತಿರುವ ಶ್ರೀಮತಿ ಶಿಭಾ ಔಷಧೀಯ ಸಸ್ಯಗಳನ್ನು ಉಳಿಸುವ ಅಗತ್ಯತೆಯ ಬಗ್ಗೆ ವಿವರಿಸಿದರೆ, ಶ್ರೀಮತಿ ಸೌಮ್ಯ ಅವರು ಶಾಲೆಯಲ್ಲಿ ನಿರ್ವಹಿಸುವ ಬಗ್ಗೆ ಗೊಬ್ಬರ ನೀರು ಇತ್ಯಾದಿ ಜವಾಬ್ದಾರಿಯನ್ನು ಹಂಚಿದರು.ಶಾಲಾ ಪರಿಸರ ಸಂಘದ ವಿದ್ಯಾರ್ಥಿಗಳು ಪರಿಸರ ಗೀತೆಯನ್ನು ಹಾಡಿ ಪರಿಸರ ಉಳಿಸುವ ಪಣತೊಟ್ಟರು.ಶಾಲಾ ಮು ಖ್ಯೋಪಾಧ್ಯಾಯಿನಿ ಶ್ರೀಮತಿ ಪರಿಮಳ ಎಂ.ವಿ ಅವರ ಮಾರ್ಗದರ್ಶನದೊಂದಿಗೆ ಕಾರ್ಯಕ್ರಮವನ್ನು ನಡೆಸಿದರು.

 

ನಿಮ್ಮದೊಂದು ಉತ್ತರ