ಕ್ರೈಂ ವಾರ್ತೆ

ಮಾರುತಿ ಕಾರಿನಲ್ಲಿ ಹಿಂಸಾತ್ಮಕವಾಗಿ ಅಕ್ರಮ ‌‌‌ಗೋಸಾಗಾಟ ಪತ್ತೆ

‌‌‌‌‌‌‌‌‌‌ವೇಣೂರು: ಕಳೆದ ರಾತ್ರಿ ವೇಣೂರು ಪೋಲಿಸ್ ಠಾಣಾ ವ್ಯಾಪ್ತಿಯ ಪೆರ್ಮುಡ ಬಳಿ ಆರೋಪಿಗಳಿಬ್ಬರು ಗೋವುವನ್ನು ಕದ್ದು ಕಾರಿನಲ್ಲಿ ಹಿಂಸಾತ್ಮಕ ರೀತಿಯಲ್ಲಿ ಕೊಂಡೊಯ್ಯಲು ಪ್ರಯತ್ನಿಸಿದಾಗ ವೇಣೂರು ಠಾಣೆಯ ಸಬ್ ಇನ್ಸ್ಪೆಕ್ಟರ್ ಸೌಮ್ಯ ಹಾಗೂ ಸಿಬ್ಬಂದಿಗಳು ಗೋಮಾತೆಯನ್ನು ರಕ್ಷಿಸಿಸಿದ್ದಾರೆ. ಆರೋಪಿಗಳು ಪರಾರಿಯಾಗಿದ್ದು ಪತ್ತೆಗೆ ಬಲೆ ಬೀಸಿದ್ದಾರೆ.ವೇಣೂರು ಠಾಣಾ ಪೋಲೀಸ್ ಉಪ ನಿರೀಕ್ಷರಾದ ಸೌಮ್ಯರವರು ತಮ್ಮ ಸಿಬ್ಬಂದಿಗಳ ಜೊತೆ ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ ರಾತ್ರಿ ಸುಮಾರು 7.05 ಗಂಟೆಗೆ ಅಳದಂಗಡಿಯಿಂದ ನೀಲಿ ಬಣ್ಣದ ಮಾರುತಿ 800 ಕಾರಿನಲ್ಲಿ ಇಬ್ಬರು ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುವ ಖಚಿತ ಮಾಹಿತಿ ದೊರೆತ ಮೇರೆಗೆ ರಾತ್ರಿ ಸುಮಾರು 7:30 ಗಂಟೆಗೆ ಬೆಳ್ತಂಗಡಿ ತಾಲೂಕು ನಿಟ್ಟಡೆ ಗ್ರಾಮದ ಪೆರ್ಮುಡ ಎಂಬಲ್ಲಿ ಸಿಬ್ಬಂದಿಯವರೊಂದಿಗೆ ಕಾಯುತ್ತಿರುವ ಸಮಯ ಅಳದಂಗಡಿ ಕಡೆಯಿಂದ ಒಂದು ಮಾರುತಿ 800 ಕಾರು ವೇಗವಾಗಿ ಬರುತ್ತಿದ್ದು ಅದನ್ನು ನೋಡಿ ನಿಲ್ಲಿಸಲು ಸೂಚಿಸಿದರು.

ಆದರೆ ವಾಹನ ಚಾಲಕ ನಿಲ್ಲಿಸದೇ ಮುಂದಕ್ಕೆ ಹೋಗದಾಗ ಪೊಲೀಸರು ಜೀಪಿನಲ್ಲಿ ಬೆನ್ನಟ್ಟಿ ಸುಮಾರು ½ ಕಿಮೀ ದೂರ ಹೋದಾಗ ಆರೋಪಿತರು ಮಾರುತಿ 800 ಕಾರನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಪೋಲಿಸರು ಜೀಪಿನಿಂದ ಇಳಿಯುತ್ತಿದ್ದಂತೆ ಕಾರಿನ ಚಾಲಕ ಹಾಗೂ ಕಾರಿನಲ್ಲಿದ ಇನ್ನೊಬ್ಬ ವ್ಯಕ್ತಿ ಪೊಲೀಸರು ಬರುವುದನ್ನು ಕಂಡು ಪಕ್ಕದ ಗುಡ್ಡೆಗೆ ಓಡಿಹೋಗಿ ಪರಾರಿಯಾಗಿದ್ದಾರೆ.

ನಿಂತಿದ್ದ ಮಾರುತಿ 800 ಕಾರಿನೊಳಗೆ ಒಂದು ಕಂದು ಬಣ್ಣದ ದನವನ್ನು ಹಿಂಸಾತ್ಮಕ ರೀತಿಯಲ್ಲಿ ಸಾಗಾಟ ಮಾಡುತ್ತಿರುವುದು ಕಂಡು ಬಂದಿರುತ್ತದೆ.
ನಮ್ಮ ದೇಶದಲ್ಲಿ ಗೋಮಾತೆಗೆ ತಾಯಿ ಸ್ಥಾನ ನೀಡಿದ ಸಂಸ್ಕೃತಿ ನಮ್ಮದು.ಗೋವುಗಳ‌ನ್ನು ನಾವು ಪೂಜಿಸುತ್ತೇವೆ. ಆದರೂ ಗೋಕಳ್ಳರು ಗೋವುಗಳನ್ನು ಕದಿಯುವ ಬುದ್ದಿ ಇನ್ನೂ ಬಿಟ್ಟಿಲ್ಲ.
ವೇಣೂರು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ.
ಈ ಸಂದರ್ಭದಲ್ಲಿ ಪೋಣೂರು ಪೋಲಿಸ್ ಠಾಣೆಯ ಎ.ಎಸ್.ಐ ವೆಂಕಟೇಶ್, ಹೆಡ್ ಕಾನ್ಸ್ಸ್ಟೆಬಲ್ ಅಭಿಜಿತ್,ದೇವರಾಜ್, ರಾಜೇಶ್, ಪಿಸಿ ಯತೀಂದ್ರ, ಶಶಿ ಕಾರ್ಯಚರಣೆಯಲ್ಲಿದ್ದರು.
ಆರೋಪಗಳ ಬಂಧನಕ್ಕೆ ಈಗಾಗಲೇ ಬಲೆ ಬೀಸಲಾಗಿದ್ದು, ಶೀಘ್ರವಾಗಿ ಪತ್ತೆ ಹಚ್ಚುತ್ತೇವೆ ಎಂದು ವೇಣೂರು ಸಬ್ ಇನ್ಸ್ಪೆಕ್ಟರ್ ಸೌಮ್ಯ ತಿಳಿಸಿದ್ದಾರೆ.

ನಿಮ್ಮದೊಂದು ಉತ್ತರ