ಮುಂಡೂರು: ಮುಂಡೂರು ಗ್ರಾಮದ ಬಳ್ಳಿದಡ್ಡ ಮನೆ ನಿವಾಸಿ ಹರೀಶ್ ಎಂಬವರ
ಪತ್ನಿ ಶ್ರೀಮತಿ ಶಿಲ್ಪಾ(21ವ) ನಾಪತ್ತೆಯಾಗಿರುವುದಾಗಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ಪತಿ ಹರೀಶ್ ಅವರು ದೂರು ನೀಡಿದ್ದಾರೆ.
ಸುಮಾರು ಒಂದು ವರ್ಷದಿಂದ ಬೆಳ್ತಂಗಡಿಯ ಅಂಗಡಿಯಲ್ಲಿ ಟೈಲರಿಂಗ್ ಕೆಲಸ ಮಾಡಿಕೊಂಡಿದ್ದು ಅ. 20 ರಂದು ಎಂದಿನಂತೆ ಬೆಳೆಗ್ಗೆ 09.30 ಗಂಟೆಗೆ ಟೈಲರಿಂಗ್ ಕೆಲಸಕ್ಕೆ ಹೊರಟು ಹೋಗಿದ್ದು ಸಂಜೆ 5:30 ಗಂಟೆಗೆ ಬರುತ್ತಿದ್ದವರು ಬರದೇ ಇದ್ದು ಅವರ ಮೊಬೈಲ್ ಗೆ ಕರೆ ಮಾಡಿದರೂ, ಯಾವುದೇ ಪ್ರತಿಕ್ರಿಯೆ
ಇಲ್ಲ. ಕೆಲಸಕ್ಕೂ ಹೋಗದೇ ಮನೆಗೂ ಬಾರದೇ ಸಂಬಧಿಕರ ಮನೆಗೂ ಹೋಗದೇ ಕಾಣೆಯಾಗಿರುತ್ತಾರೆ. ಎಂದು ದೂರಿನಲ್ಲಿ ತಿಳಿಸಿದ್ದಾರೆ.