ತಾಲೂಕು ಸುದ್ದಿ

ಸಂಭ್ರಮ-ಸಡಗರದಿಂದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಹೆಗ್ಗಡೆಯವರ 54ನೇ ವರ್ಷದ ಪಟ್ಟಾಭಿಷೇಕ ವರ್ಧಂತ್ಯುತ್ಸವ ಆಚರಣೆ

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ 54ನೇ ವರ್ಷದ ಪಟ್ಟಾಭಿಷೇಕ ವರ್ಧಂತ್ಸುತ್ಸವವು ಅ.24ರಂದು ಅದಿತ್ಯವಾರ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ವಿವಿಧ ಧಾಮಿ೯ಕ ಕಾಯ೯ಕ್ರಮದೊಂದಿಗೆ ಸಂಭ್ರಮ- ಸಡಗರದಿಂದ ಜರುಗಿತು.


ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಭಗವಾನ್ ಚಂದ್ರನಾಥ ಸ್ವಾಮಿ ಬಸದಿ ಹಾಗೂ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ವಿಶೇಷ ಪೂಜೆ ನಡೆಯಿತು. ನಾಡಿನಾದ್ಯಂತ ಧಾರ್ಮಿಕ ಕ್ಷೇತ್ರಗಳ ಮುಖಂಡರು, ನಾಡಿನ ಗಣ್ಯರು, ಹೆಗ್ಗಡೆಯವರ ಅಭಿಮಾನಿಗಳು, ಕ್ಷೇತ್ರದ ಭಕ್ತರು, ಸಂಘ-ಸಂಸ್ಥೆಯವರು, ಸರಕಾರಿ ಅಧಿಕಾರಿಗಳು, ಊರ-ಪರವೂರ ನಾಗರಿಕರು, ಕ್ಷೇತ್ರಕ್ಕೆ ಬಂದು ಹೆಗ್ಗಡೆಯವರಿಗೆ ಭಕ್ತಿಪೂರ್ವಕ

ಅಭಿನಂದನೆಗಳನ್ನು, ಗೌರವನ್ನು ಸಲ್ಲಿಸಿದರು.
ಸಂಜೆ ಅಮೃತವಷಿ೯ಣಿ ಸಭಾ ಭವನದಲ್ಲಿ ಸಭಾ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಗಡಿನಾಡ ಪ್ರಾಧಿಕಾರ ಬೆಂಗಳೂರು ಇದರ ಅಧ್ಯಕ್ಷ, ತುಮಕೂರು ಜಿಲ್ಲಾ ನಿವೃತ್ತ ಜಿಲ್ಲಾಧಿಕಾರಿ ಡಾ. ಸಿ. ಸೋಮಶೇಖರ್ ಭಾಗವಹಿಸಿ ಹೆಗ್ಗಡೆಯವರ ಸಾಧನೆಗಳ ಬಗ್ಗೆ ಮಾತನಾಡಿದರು ಕಾರ್ಯಕ್ರಮದಲ್ಲಿ ಕ್ಷೇತ್ರದ ನೌಕರರಾದ ಸುಭಾಶ್ಚಂದ್ರ ಜೈನ್ ಹಾಗೂ ಬಾಲಕೃಷ್ಣ ಪೂಜಾರಿ ಇವರನ್ನು ಡಾ.ಹೆಗ್ಗಡೆ ಸನ್ಮಾನಿಸಿದರು. ಕಾಯ೯ಕ್ರಮವನ್ನು ಉದ್ದೇಶಿಸಿ ಮಾತನಾಡಿದ
ಡಾ. ಡಿ. ವೀರೇಂದ್ರ ಹೆಗ್ಗಡೆಯವರು ನೂತನ ಯೋಜನೆಗಳನ್ನು ಪ್ರಕಟಿಸಿದರು.


ಶ್ರೀಮತಿ ಹೇಮಾವತಿ ವಿ. ಹೆಗ್ಗಡೆಯವರು
SHG Movement International Conference -2019ಹಾಗೂ ‘ಜೈನ ಗ್ರಂಥಸ್ಥ’ ಜನಪದ ಹಾಡುಗಳು ಪುಸ್ತಕಗಳನ್ನು ಬಿಡುಗಡೆ ಗೊಳಿಸಿದರು. ಸನ್ಮಾನಿತರಾದ ಬಾಲಕೃಷ್ಣ ಪೂಜಾರಿ ಮತ್ತು ಶುಭಚಂದ್ರ ಅನಿಸಿಕೆ ವ್ಯಕ್ತಪಡಿಸಿದರು.
ಜನಮಂಗಲ ಕಾರ್ಯಕ್ರಮದಲ್ಲಿ ವಿಶೇಷ ಚೇತನರಿಗೆ ಸಲಕರಣೆ ವಿತರಣೆಯನ್ನು ಡಿ. ಸುರೇಂದ್ರ ಕುಮಾರ್‌ ಮತ್ತು ಡಿ. ಹರ್ಷೇಂದ್ರ ಕುಮಾರ್‌ ನೇರವೇರಿಸಿದರು.
ನಾಲ್ಕು ಪ್ರಖ್ಯಾತ ಆಸ್ಪತ್ರೆಗಳಿಗೆ ಸಿ.ಟಿ, ಸ್ಕ್ಯಾನ್ ಮಂಜೂರಾತಿ ಪತ್ರ ಹಸ್ತಾಂತರವನ್ನು
ಹೆಗ್ಗಡೆಯವರು ಹಸ್ತಾಂತರಿಸಿದರು
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಂದ ಪ್ರಾಥ೯ನೆ ಹಾಡಿದರು.ಸುಬ್ರಹ್ಮಣ್ಯ ಪ್ರಸಾದ್, ಮೆನೇಜರ್‌, ಅನ್ನಪೂರ್ಣ ಭೋಜನಾಲಯ ಸ್ವಾಗತಿಸಿದ ರು.
ಲಕ್ಷೀನಾರಾಯಣ ರಾವ್, ಧನ್ಯವಾದವಿತ್ತರು.
ರವಿಶಂಕರ್ ಜಿ.ಕೆ, ಕನ್ನಡ ಪ್ರಾದ್ಯಾಪಕರು,
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜು, ಉಜಿರೆ ಕಾಯ೯ಕ್ರಮವನ್ನು ನಿರೂಪಿಸಿದರು.

ನಿಮ್ಮದೊಂದು ಉತ್ತರ