ಗುರುವಾಯನಕೆರೆ: ಗುರುವಾಯನಕೆರೆ ಅಭಯ ಆಸ್ಪತ್ರೆಯ ಸ್ಟಾಫ್ ನರ್ಸ್ ಮೋಹಿನಿ(32.ವ) ರವರು ಅಲ್ಪಕಾಲದ ಅಸೌಖ್ಯದಿಂದ ಆ.28 ರಂದು ನಿಧನರಾದರು.
ಅಭಯ ಆಸ್ಪತ್ರೆಯಲ್ಲಿ ಸುಮಾರು 8 ವರ್ಷಗಳ ಕಾಲ ಸ್ಟಾಫ್ ನರ್ಸ್ ಆಗಿ ಸೇವೆ ಸಲ್ಲಿಸಿದ್ದ ಅವರು, ತಮ್ಮ ನಿಸ್ವಾರ್ಥ ಹಾಗೂ ಜನಸ್ನೇಹಿ ಸೇವೆಯ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.
ಮೃತರು ಪತಿ ಮಣಿಪಾಲ ಇಂದ್ರಾಳಿಯ ಶ್ರೀಕರ್, ಮೂರು ತಿಂಗಳ ಗಂಡು ಮಗು, ಅತ್ತೆ, ಮಾವ ನಾಗೇಂದ್ರ, ಮೈದುನ ಶ್ರೀಕಾಂತ್, ತಂದೆ ಕಕ್ಕೆಪದವು ಗಿಳಿಂಗಾಜೆ ಲೋಕಯ್ಯ ನಾಯ್ಕ, ತಾಯಿ ಕುಸುಮ, ಮೂವರು ಸಹೋದರರಾದ ಪರಮೇಶ್ವರ, ಬಾಬು, ಹೊನ್ನಪ್ಪ, ಸಹೋದರಿ ಜಾನಕಿ ಪಿಂಡಿವನ, ಅಪಾರ ಬಂಧು ಮಿತ್ರರನ್ನು
ಕುಟುಂಬಸ್ಥರು ಹಾಗೂ ಅಗಲಿದ್ದಾರೆ.