ಕ್ರೈಂ ವಾರ್ತೆ

ರಾಷ್ಟ್ರೀಯ ಹೆದ್ದಾರಿ ಬೆದ್ರೋಡಿಯಲ್ಲಿ ಅಪಘಾತ : ನಿಂತಿದ ಲಾರಿಗೆ ಪಿಕಾಪ್ ಡಿಕ್ಕಿ – ದುರಸ್ಥಿ ಕೆಲಸ ಮಾಡುತ್ತಿದ್ದ ಮೂವರು ಮೃತ್ಯು

ಉಪ್ಪಿನಂಗಡಿ : ರಸ್ತೆ ಪಕ್ಕ ಕೆಟ್ಟು ನಿಂತಿದ್ದ ಲಾರಿಯೊಂದಕ್ಕೆ ಪಿಕಪ್ ಡಿಕ್ಕಿ ಹೊಡೆದ ಪರಿಣಾ
ಮ ಲಾರಿಯ ದುರಸ್ಥಿ ಕೆಲಸ ಮಾಡುತ್ತಿದ್ದ ಮೂವರ ಪೈಕಿ ಇಬ್ಬರು ಸ್ಥಳದಲ್ಲಿಯೇ ಮೃತ
ಪಟ್ಟು , ಓರ್ವ ಆಸ್ಪತ್ರೆ ಸಾಗಿಸುತ್ತಿರುವಾಗ ದಾರಿ ಮಧ್ಯೆ ಸಾವನ್ನಪ್ಪಿದ ಭೀಕರ ಘಟನೆ ರಾಷ್ಟ್ರೀಯ ಹೆದ್ದಾರಿ 75ರ ಬಜತ್ತೂರು ಗ್ರಾಮದ ಬೆದ್ರೋಡಿ ಎಂಬಲ್ಲಿ ಸೋಮವಾರ ಸಂಜೆ ನಡೆದಿದೆ.

ಶಿವಮೊಗ್ಗ ಜಿಲ್ಲೆಯ ಮಧು (36) ಬೆಂಗಳೂ
ರಿನಲ್ಲಿ ಮೆಕಾನಿಕ್ ಆಗಿರುವ ಮಹಮ್ಮದ್ಅಫ್‌
ಜಲ್( 40) ಸ್ಥಳದಲ್ಲೇ ಮೃತ ಪಟ್ಟವರು. ಇವರ ಸಹಾಯಕರಾಗಿದ್ದ ಬೆಂಗಳೂರು ನಿವಾಸಿ ರೆಹ
ಮಾನ್ ( 20 ) ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು . ಇವರನ್ನು ಕೂಡಲೇ ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ದಾರಿ ಮಧ್ಯೆ ಅವರು ಕೂಡ ಅಸುನೀಗಿದ್ದಾರೆ.


ಬೆದ್ರೋಡಿ ಬಸ್ಸು ನಿಲ್ದಾಣದ ಪಕ್ಕಲಾರಿಯೊಂದು ಕೆಟ್ಟು ನಿಂತಿತ್ತು ಇದರ ಗೇರ್ ಬಾಕ್ಸ್ ರಿಪೇರಿ ಕೆಲಸ ಮೆಕ್ಯಾನಿಕರಿಂದ ನಡೆಯುತ್ತಿತ್ತು. ಈ ವೇಳೆ ಉಪ್ಪಿನಂಗಡಿ ಕಡೆಯಿಂದ ಬಂದ ಪಿಕಪ್ ವಾಹ
ನ ಚಾಲಕನ ನಿಯಂತ್ರಣ ತಪ್ಪಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದು ಈ ದುರಂತಸಂಭವಿಸಿದೆ.

ನಿಮ್ಮದೊಂದು ಉತ್ತರ