ಕಣಿಯೂರು : ಇಲ್ಲಿಯ ಮಲೆಂಗಲ್ಲು ನಿವಾಸಿ ಅಬೂಬಕ್ಕರ್ ಎಂಬವರ ಮನೆಯಲ್ಲಿ ಕಳ್ಳರು ಕಳ್ಳತನಕ್ಕೆ ಸಂಚು ರೂಪಿಸಿ ವಿಫಲಗೊಂಡು ಪರಾರಿಯಾದ ಘಟನೆ ಆ.29 ರಂದು ರಾತ್ರಿ ನಡೆದಿದೆ.
ಮನೆಯ ಹಿಂಬದಿ ಕಿಟಕಿಯಿಂದ ಬಿದಿರಿನ ಕೊಕ್ಕೆಯನ್ನು ಉಪಯೋಗಿಸಿ (ದೋಂಟಿ)ಮನೆಯ ಬಾಗಿಲಿಗೆ ಒಳಗಿನಿಂದ ಹಾಕಿರುವ ಚಿಲಕವನ್ನು ಜಾರಿಸಿ ಬಾಗಿಲು ತೆರೆಯಲು ಪ್ರಯತ್ನಿಸುತ್ತಿರುವ ಸಂದರ್ಭದಲ್ಲಿ ಎಚ್ಚರಗೊಂಡ ಮನೆಯವರು ಲೈಟ್ ಹಾಕಿದಾಗ ಕಳ್ಳರು ಕಳ್ಳತನಕ್ಕೆ ಉಪಯೋಗಿಸಿದ್ದ ಬಿದಿರಿನ ಕೊಕ್ಕೆ, ಕುರ್ಚಿ ಹಾಗೂ ಟಾರ್ಚ್ ಲೈಟನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾ
ಗಿದ್ದಾರೆ. ಈ ಹಿಂದೆಯೂ ಒಮ್ಮೆ ಇದೇ ಮನೆಯಲ್ಲಿ ಮನೆಯವರು ಮಲಗಿದ್ದ ವೇಳೆ ಕಳ್ಳತನ ನಡೆದಿತ್ತು ಎನ್ನಲಾಗಿದೆ.