ಕ್ರೈಂ ವಾರ್ತೆ

ಮೋಟಾರ್ ಸೈಕಲ್ ನಲ್ಲಿ ಅಕ್ರಮ ಗಾಂಜಾ ಮಾರಾಟ: ಆರೋಪಿ ಬಂಧನ

ಬಂಟ್ವಾಳ: ಮೋಟಾರ್ ಸೈಕಲ್ನಲ್ಲಿ ಅಕ್ರಮವಾಗಿ ರೂ.30 ಸಾವಿರ ಮೌಲ್ಯದ ಗಾಂಜಾ ಸಾಗಿಸುತ್ತಿದ್ದ ವ್ಯಕ್ತಿಯನ್ನು ಬಂಟ್ವಾಳ ಪೊಲೀಸ್ ರು ಬಂಧಿಸಿದ ಘಟನೆ ಜು. 19 ರಂದು ನಡೆದಿದೆ.
ಎಸ್.ಐ ಅವಿನಾಶ್ ಹಾಗು ಸಿಬ್ಬಂದಿ ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ ದೊರೆತ ಮಾಹಿತಿಯಂತೆ ಮುಡಿಪು ಕಡೆಯಿಂದ ಮೆಲ್ಕಾ
ರ್ ಕಡೆಗೆ ವ್ಯಕ್ತಿಯೋರ್ವರು ಮೋಟಾರ್ ಸೈಕಲ್ ಒಂದರಲ್ಲಿ ಮಾದಕ ವಸ್ತು ಗಾಂಜಾವನ್ನು ಮಾರಾಟಮಾಡಲುಸಾಗಾಟಮಾಡುತ್ತಿರುವುದಾಗಿ ತಿಳಿದು ಬಂದ ಖಚಿತ ಮಾಹಿತಿಯಂತೆ ಸಜಿಪಮುನ್ನೂರು ಗ್ರಾಮದ, ಕಂದೂರು

ಎಂಬಲ್ಲಿಗೆ ತಲುಪಿ, ವಾಹನ ತಪಾಸಣೆ ಮಾಡುತ್ತಿದ್ದ ಸಮಯ ಮುಡಿಪು ಕಡೆಯಿಂದ ಮೋಟಾರ್ ಸೈಕಲ್ ಒಂದರಲ್ಲಿ ವ್ಯಕ್ತಿಯೋರ್ವನು ಮೋಟಾರ್ ಸೈಕಲ್ ಸವಾರಿ ಮಾಡಿಕೊಂಡು ಬರುತ್ತಿದ್ದುದನ್ನು ಕಂಡು ನಿಲ್ಲಿಸಿ, ಆತನ ಹೆಸರು ವಿಳಾಸ ಕೇಳಲಾಗಿ, ಇಲಿಯಾಸ್ @ ಎಲಿಯಾಸ್ (36ವರ್ಷ) ಸುಭಾಶ್ ನಗರ ಮನೆ, ಸಜಿಪಮೂಡ ಗ್ರಾಮ, ಬಂಟ್ವಾಳ ತಾಲೂಕು ಎಂದು ತಿಳಿಸಿರುತ್ತಾನೆ. ಕೂಲಂಕುಷ ವಿಚಾರಿಸಿದಾಗ ಮಾದಕ ವಸ್ತು ಗಾಂಜಾವನ್ನು ವಶದಲ್ಲಿ ಇಟ್ಟುಕೊಂಡಿರುವುದನ್ನು ಒಪ್ಪಿಕೊಂಡಿರುತ್ತಾನೆ. ಆರೋಪಿ ಇಲಿಯಾಸ್ ಕಿಸೆಯಲ್ಲಿ ಮತ್ತು , ಮೋಟಾರ್ ಸೈಕಲ್ ನ ಸೀಟಿನ ಅಡಿಯ ಬಾಕ್ಸ್ ನಲ್ಲಿ ಗಾಂಜಾ ತುಂಬಿದ ಪ್ಲಾಸ್ಟಿಕ್ ತೊಟ್ಟೆ ಇರುವುದು ಕಂಡು ಬಂದಿದ್ದು, ೧೪೩೦ ಗ್ರಾಂ ತೂಕದ ಗಾಂಜಾ ಹಾಗೂ ೧೦ ಪ್ಯಾಕ್ ಒ.ಸಿ.ಬಿ. ಸ್ಲಿಮ್ ಪ್ರೀಮಿಯಮ್ ಎಂದು ಅಂಗ್ಲ ಭಾಷೆಯಲ್ಲಿ ಬರೆದ ಚಿಕ್ಕ ಪ್ಯಾಕೆಟ್ ಗಳು ಇದ್ದು, ಗಾಂಜಾ ಸೇವನೆಗೆ ಬಳಸುವ ಸ್ಟ್ರಿಪ್ ಆಗಿರುತ್ತದೆ. ಗಾಂಜಾ ಸಾಗಾಟಕ್ಕೆ ಬಳಸಿದ ಆಕ್ಟಿವಾ 5 ಜಿ. ಕಪ್ಪ ಬಣ್ಣದ ಮೋಟಾರ್ ಸೈಕಲ್ ನಂ; ಕೆ.ಎ.70.ಇ.2529 ಮತ್ತು ಗಾಂಜಾ ಹಾಗೂ ಸೇವನೆಗೆ ಬಳಸುವ ಸ್ಟ್ರಿಪ್ ನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಅಂದಾಜು ಮೌಲ್ಯ ರೂ.30,000/- ಗಾಂಜಾ ಮತ್ತು ಮೋಟಾರ್ ಸೈಕಲ್ ನ ಅಂದಾಜು ಮೌಲ್ಯ ರೂ.50,000/- ಆಗಿದ್ದು, ಮಾದಕ ವಸ್ತು ಗಾಂಜಾವನ್ನು ಮಾರಾಟದ ಬಗ್ಗೆ ಸಾಗಾಟ ಮಾಡುತ್ತಿರು ಆರೋಪಿ ಮೇಲೆ ಕೇಸ್ ದಾಖಲಾಗಿದೆ. ಪ್ರಕರಣದ ತನಿಖೆ ಮುಂದುವರೆದಿರುತ್ತದೆ.

ನಿಮ್ಮದೊಂದು ಉತ್ತರ