ತಾಲೂಕು ಸುದ್ದಿ

ಭಾರತೀಯ ಜನತಾ ಪಾರ್ಟಿ ವಿಶೇಷ ಕಾಯ೯ಕಾರಿಣಿ ಸಭೆ

ಬೆಳ್ತಂಗಡ, : ಭಾರತೀಯ ಜನತಾ ಪಕ್ಷ ಬೆಳ್ತಂಗಡಿ ಮಂಡಲ ವತಿಯಿಂದ ವಿಶೇಷ ಕಾರ್ಯಕಾರಿಣಿ ಸಭೆ ಜು.20 ರಂದು ಬೆಳ್ತಂಗಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಲಾಭವನದಲ್ಲಿ ಜರುಗಿತು.

ಕಾರ್ಯಕ್ರಮವನ್ನು ಶಾಸಕ ಹರೀಶ್ ಪೂಂಜ ರವರು ದೀಪ ಪ್ರಜ್ವಲಿಸಿ ಉದ್ಘಾಟಿಸಿ, ಕೊರೋನ ಎರಡನೇ ಅಲೆಯನ್ನು ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಈ ದೇಶ ಯಶಸ್ವಿಯಾಗಿ ಎದುರಿಸಿದ್ದು, ಪ್ರತಿಯೊಂದರಲ್ಲಿಯೂ ಕಾಂಗ್ರೆಸ್ ನೆವನಗಳನ್ನು ಹುಡುಕುತ್ತಿದೆ. ಸೈನಿಕರು ಭಯೋತ್ಪಾದಕರನ್ನು ಕೊಂದಾಗ ಸೈನಿಕರ ವಿರುದ್ಧ ಹಾಗೂ ಕೊರೊನಾ ಲಸಿಕೆ ಬಂದಾಗ ಅದರ ವಿರುದ್ಧ ಸಂಶಯ ರೀತಿಯಲ್ಲಿ ಮಾತನಾಡುವ ಕಾಂಗ್ರೆಸ್ಸಿಗರು ಸಂಶಯ ಪಿಶಾಚಿಗಳು ಎಂದು ಆರೋಪಿಸಿದರು. ಇಂತಹ ಸಂಶಯ ಪಿಶಾಚಿಗಳನ್ನು ಓಡಿಸುವ ಕಾಯ೯ವನ್ನು ಈ ದೇಶದ ಜನತೆ ಮಾಡಲಿದ್ದಾರೆ ಎಂದು ತಿಳಿಸಿದರು.


ವೇದಿಕೆಯಲ್ಲಿ ವಿಧಾನ ಪರಿಷತ್ ಶಾಸಕ ಕೆ. ಪ್ರತಾಪಸಿಂಹ ನಾಯಕ್, ಜಿಲ್ಲಾ ಸಹಪ್ರಭಾರಿ ರಾಜೇಶ್ ಕಾವೇರಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಧೀರ್ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ಹಾಗೂ ಬೆಳ್ತಂಗಡಿ ಮಂಡಲ ಪ್ರಭಾರಿ ಹರಿಕೃಷ್ಣ ಬಂಟ್ವಾಳ್ ಉಪಸ್ಥಿತಿ ಇದ್ದರು. ಬಿಜೆಪಿ ಬೆಳ್ತಂಗಡಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು.
ಬಿಜೆಪಿ ಮಂಡಲ ಉಪಾಧ್ಯಕ್ಷ ಹರೀಶ್ ಮೋರ್ತಾಜೆ ಸ್ವಾಗತಿಸಿ, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಪಿ .ಶ್ರೀನಿವಾಸ್ ರಾವ್ ಧರ್ಮಸ್ಥಳ ಹಾಗೂ ರಾಜೇಶ್ ಪೆರ್ಮುಡ ಕಾಯ೯ಕ್ರಮ  ನಿವ೯ಹಿಸಿದರು.

 

ನಿಮ್ಮದೊಂದು ಉತ್ತರ