ಕಳೆಂಜ: ನೆರೆ ಮನೆಗೆ ಹೋಗುವುದಾಗಿ ಹೇಳಿ ಹೋಗಿದ್ದ, ಇಲ್ಲಿಯ ಬುಡಾರ ಮನೆ ನಿವಾಸಿ ಪೆರ್ನು ಗೌಡ (48.ವ) ಅವರ ಶವ ಜೂ.7ರ ಮಧ್ಯಾಹ್ನ ಚಾಕೋಟೆತ್ತಡಿ ಮಹಾಬಲ ಗೌಡ ಅವರಿಗೆ ಸೇರಿದ ಕೆರೆಯಲ್ಲಿ ಪತ್ತೆಯಾಗಿದೆ.
ಜೂ.6ರ ಸಂಜೆ ಅವರು ನೆರ ಮನೆಗೆ ಹೋಗಿದ್ದವರು ನಂತರ ಮನಗೆ ಹಿಂದಿರುಗಿರ
ಲಿಲ್ಲ. ಜೂ.7ರ ಬೆಳಿಗ್ಗೆ ಮೃತರ ತಂದೆ ಬೂಚ ಗೌಡ ನೆರ ಮನೆಗೆ ಹೋಗಿ ವಿಚಾರಿಸಿದ್ದು, ಅವರು ರಾತ್ರಿಯೇ ತಮ್ಮ ಮನೆಗೆ ಹೋಗಿರುವ ವಿಷಯ ಬೆಳಕಿಗೆ ಬಂದಿದೆ.ಕೂಡಲೇ ಸುತ್ತಮುತ್ತ
ಲಿನ ಪ್ರದೇಶದಲ್ಲಿಪೆರ್ನುಗೌಡ ಅವರಿಗಾಗಿ ಹುಡುಕಾಟ ನಡೆಸಿದ್ದು, ಎಲ್ಲಿಯೂ ಸುಳಿವು ಸಿಕ್ಕಿರಲಿಲ್ಲ.ಆದರೆ ಮಧ್ಯಾಹ್ನ 3ಗಂಟೆ ವೇಳೆಗೆ ಕೆರೆಯಲ್ಲಿ ಪೆರ್ನು ಗೌಡ ಅವರ ಶವರ ತೇಲುತ್ತಿದ್ದ ಕಂಡು ಬಂದಿದೆ. ಶವದ ಕೈಯಲ್ಲಿ ಟಾಚ್ ೯ ಹಿಡಿದು ಕೊಂಡ ಸ್ಥಿತಿಯಲ್ಲಿದ್ದು, ಅವರು ಆಕಸ್ಮಿಕವಾಗಿ ಕೆರೆಗೆ ಬಿದ್ದು ಈ ಘಟನೆ ನಡೆದಿರಬಹುದು ಎಂದು ಶಂಕಿಸಲಾಗಿದೆ.
ಘಟನಾ ಸ್ಥಳಕ್ಕೆ ಧರ್ಮಸ್ಥಳ ಪೊಲೀಸರು ಭೇಟಿ ನೀಡಿದ್ದು, ಘಟನೆ ಕುರಿತು ತನಿಖೆ ನಡೆಸುತ್ತಿದ್ದಾರೆ.