ತಾಲೂಕು ಸುದ್ದಿ

ಬೆಳ್ತಂಗಡಿ: ಪ.ಪಂ. ನಿಂದ ವಿಶಿಷ್ಟಚೇತನರಿಗೆ ನೆರವು

ಬೆಳ್ತಂಗಡಿ: ಕೋವಿಡ್ ಮಹಾಮಾರಿ ಸಂದರ್ಭದಲ್ಲಿ 32 ವಿಕಲಚಚೇತನಿರಿಗೆ ನೀಡಿರುವುದು ಅಭಿನಂದನೀಯ. ಕಷ್ಟವನ್ನು ಅರಿತುಕೊಂಡು ಆತ್ಮಸ್ಥೈರ್ಯ ತುಂಬುವ ಕಾರ್ಯವಾಗಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.ಪಟ್ಟಣ ವ್ಯಾಪ್ತಿಯ 32 ಮಂದಿ ವಿಶಿಷ್ಟಚೇತನರಿಗೆ ಜೀವನ ನಿರ್ವಹಣೆ ಬತ್ತೆ ತಲ 3000 ರೂ.ನಂತೆ ವಾರ್ಡ್ ಸದಸ್ಯರು ಮತ್ತು ಸಿಬಂದಿ ಮನೆಮನೆಗೆ ತೆರಳಿ ನೀಡುವ ಕಾರ್ಯಕ್ರಮವನ್ನು ಸಾಂಕೇತಿಕವಾಗಿ ನೀಡಿ ಮಾತನಾಡಿದರು.ಈಗಾಗಲೇ ಪಟ್ಟಣದಲ್ಲಿ ತಾಲೂಕು ಆಸ್ಪತ್ರೆ, ವ್ಯಾಕ್ಸಿನ್ ನೀಡುವ ನಿಟ್ಟಿನಲ್ಲಿ ಪ.ಪಂ. ಕ್ರಿಯಾಶೀಲವಾಗಿ ಕೆಲಸ ನಿರ್ವಹಿಸಿದೆ. ಯಶಸ್ವಿಯಾಗಿ ಕೊರೊನಾ ದೂರಮಾಡುವ ನಿಟ್ಡಿನಲ್ಲಿ ಯಶಸ್ವಿ ಕೊರೊನಾ ಮುಕ್ತ ಪ.ಪಂ. ಮಾಡುವಲ್ಲಿ ಟಾಸ್ಕ್ ಪೋರ್ಸ್ ಸದಸ್ಯತು ಉತ್ಸುಕರಾಗಿ ಎಂದು ಸಲಹೆ ನೀಡಿದರು.ಜಿಲ್ಲೆಗೆ ಬೇಕಾಗುವ ವ್ಯಾಕ್ಸಿನ್ ಪೂರೈಸಲಾಗುತ್ತಿದೆ. ತಿಂಗಳೊಳಗೆ ಸಂಪೂರ್ಣ ವ್ಯಾಕ್ಸಿನ್ ಕೊರತೆ ನೀಗಲಿದೆ ಎಂದು ಶಾಸಕರು ತಿಳಿಸಿದರು.

ಮುಖ್ಯಾಧಿಕಾರಿ ಎಂ.ಎಚ್.ಸುಧಾಕರ್ ಪ್ರಾಸ್ತಾವಿಸಿ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ವಿಶಿಷ್ಟ ಚೇತನರ ಜತೆಗಿದ್ದೇವೆ ಎಂಬ ನೆಲೆಯಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.

ಪ.ಪಂ.ಅಧ್ಯಕ್ಷೆ ರಜನಿ ಕುಡ್ವ, ಉಪಾಧ್ಯಕ್ಷ ಜಯಾನಂದ ಗೌಡ, ಸ್ಥಾಯಿ ಸಮಿತಿ ಅಧ್ಯಕ್ಷೆ ತುಳಸಿ ಕರುಣಾಕರ್,ಎಂಜಿನಿಯರ್ ಮಹಾವೀರ ಆರಿಗ, ಸದಸ್ಯರಾದ ಜಗದೀಶ್ ಡಿ., ಶರತ್ ಶೆಟ್ಟಿ, ಗೌರಿ, ಅಂಬರೀಶ್, ಜನಾರ್ದನ ಉಪಸ್ಥಿತರಿದ್ದರು.

ನಿಮ್ಮದೊಂದು ಉತ್ತರ