ಕ್ರೈಂ ವಾರ್ತೆ

ಶಿಬಾಜೆ ರಬ್ಬರ್ ತೋಟದಲ್ಲಿ ಅಕ್ರಮ ಕಸಾಯಿಖಾನೆ: ಪೊಲೀಸ್ ದಾಳಿ ಓವ೯ನ ಬಂಧನ.

ಬೆಳ್ತಂಗಡಿ : ಶಿಬಾಜೆ ಗ್ರಾಮದ ತುಂಬೆತ್ತಡ್ಡ ಎಂಬಲ್ಲಿ ರಬ್ಬರ್ ತೋಟದ ನಡುವೆ ನಡೆಯುತ್ತಿದ್ದ ಅಕ್ರಮ ಕಸಾಯಿಖಾನೆಗೆ ಧರ್ಮಸ್ಥಳ ಪೊಲೀಸ್ ದಾಳಿ ನಡೆಸಿ ಓವ೯ ಆರೋಪಿಯನ್ನು ಬಂಧಿಸಿದ ಘಟನೆ ವರದಿಯಾಗಿದೆ.


ಸ್ಥಳೀಯ ಬಜರಂಗದಳದ ಕಾರ್ಯಕರ್ತರ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಈ ದಾಳಿ ನಡೆಸಿರುತ್ತಾರೆ. ಈ ಸಂದರ್ಭದಲ್ಲಿ ಒಬ್ಬ ಆರೋಪಿ ತೋಮಸ್ ಯಾನೆ ಸನ್ನಿ ಎಂಬಾತನನ್ನು ಬಂಧಿಸಲಾಗಿದೆ ಹಾಗೂ ಸುಮಾರು 75 ಕೆಜಿ ಯಷ್ಟು ದನದ ಮಾಂಸ ಮತ್ತು ಇತರ ಸಾಮಾಗ್ರಿಗಳನ್ನು ವಶಕ್ಕೆ ಪಡೆಯಲಾಗಿದೆ.
ಕಳೆದ ವಾರದಲ್ಲಿ ಕಳಂಜ ಗ್ರಾಮದಲ್ಲಿ ಬಜರಂಗದಳದ ಮಾಹಿತಿಯ ಮೇರೆಗೆ ಅಕ್ರಮ ಕಸಾಯಿಖಾನೆಗೆ ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದರು.ಕೋವಿಡ್-19 ಮಹಾಮಾರಿ ಕಾಯಿಲೆಯ ಸಂದರ್ಭದಲ್ಲೂ ಅಕ್ರಮ ಕಸಾಯಿಖಾನೆಯ ನಡೆಯುತ್ತಿರುವುದು ಅತ್ಯಂತ ದುಃಖಕರವಾದ ಸಂಗತಿಯಾಗಿದೆ.

ನಿಮ್ಮದೊಂದು ಉತ್ತರ