ಪಟ್ರಮೆ: ಇಲ್ಲಿಯ ಕೊಡಂದೂರು ಎಂಬಲ್ಲಿ ಪಂಪುಶೆಡ್ ನೊಳಗೆ ಸ್ವಿಚ್ ಹಾಕುತ್ತಿದ್ದ ಸಂದರ್ಭದಲ್ಲಿ ವಿದ್ಯುತ್ ಶಾಕ್ ಹೊಡೆದು ತಾಯಿ ಹಾಗೂ ಪುಟ್ಟ ಮಗ ಸ್ಥಳ ದಲ್ಲೇ ಸಾವನ್ನಪ್ಪಿದ ಘಟನೆ ಮೇ 30 ರಂದು ಬೆಳಿಗ್ಗೆ ಪಟ್ರಮೆಯಲ್ಲಿ ನಡೆದಿದೆ.
ಕೊಡಂದೂರುನಿವಾಸಿ ಹರೀಶ್ ಗೌಡ ಎಂಬವರ ಪತ್ನಿ ಶ್ರೀ ಮತಿ ಗೀತಾ (30ವ) ಹಾಗೂ ಪುತ್ರ ಭವಿಷ್ (4ವ) ಮೃತಪಟ್ಟವರು.
ದನಗಳಿಗೆ ನೀರು ಕೊಡಲೆಂದು ಪಂಪುಶೆಡ್ ಗೆ ಹೋಗಿ ಸ್ವಿಚ್ ಹಾಕುವ ಸಂದರ್ಭದಲ್ಲಿ ಈ ದುಘ೯ಟನೆ ನಡೆದಿದೆ.
ಧಮ೯ಸ್ಥಳ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು ತನಿಖೆ ನಡೆಸುತ್ತಿದ್ದಾರೆ.