ಕ್ರೈಂ ವಾರ್ತೆ

ಕರಾಯ ಪರಿಸರದಲ್ಲಿ ಕಳ್ಳತನ: ಕಳ್ಳರ ತಂಡ ಬಂಧನ

ಬೆಳ್ತಂಗಡಿ : ಕರಾಯ ಪರಿಸರದಲ್ಲಿ ಈ ಬಾರಿಯ ವರ್ಷಾರಂಭದ ಜನವರಿಯಲ್ಲಿ ಹಾಗೂ ಕಳೆದ ಮೇ ನಲ್ಲಿ ನಡೆದ ಮನೆ ಕಳ್ಳತನದ ಆರೋಪಿಗಳನ್ನು ಪೊಲೀಸ್ ಬಂಧಿಸಿದ್ದಾರೆ.
ಬಂಧಿತರು ಕರಾಯ ಪರಿಸರದವರಾಗಿದ್ದು,
ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ನೋಡಿ ಇವರು ಈ ಎರಡು ಮನೆಗಳಲ್ಲಿ ಕಳವು ನಡೆಸಿ, ಲಕ್ಷಾಂತರ ರೂಪಾಯಿ ನಗ- ನಗದು ಕಳ್ಳತನಗೈದಿದ್ದರು.ಮನೆಯಲ್ಲಿ ಯಾರೂ ಇಲ್ಲದನ್ನು ಖಚಿತಪಡಿಸಿಕೊಂಡು ಕರಾಯದಲ್ಲಿ ಎರಡು ಮನೆಗಳಿಗೆ ನುಗ್ಗಿ ಕಳ್ಳತನ ನಡೆಸಿದ ಕಳ್ಳರ ತಂಡವನ್ನುಬಂಧಿಸುವಲ್ಲಿ ಉಪ್ಪಿನಂಗಡಿ ಪೊಲೀಸರುಯಶಸ್ವಿಯಾಗಿದ್ದಾರೆ.


ಉರುವಾಲು ಗ್ರಾಮದ ಮುರಿಯಾಳ ಎಂಬಲ್ಲಿ
ಯ ಅಬ್ದುಲ್ ಖಾದರ್ ಎಂಬವರ ಪುತ್ರ ಸಂಶು ಯಾನೆ ಸಂಶುದ್ದೀನ್ (30), ಮೂಲತಃ ಪುತ್ತೂರು ತಾಲೂಕಿನ ಹಿರೇಬಂಡಾಡಿ ಮುರ ಎಂಬಲ್ಲಿಯ ನಿವಾಸಿ ಅಬ್ಬಾಸ್ ಎಂಬವರ ಪುತ್ರ, ಪ್ರಸ್ತುತ ಕರಾಯ ಗ್ರಾಮದ ಕಲ್ಪನೆಎಂಬಲ್ಲಿ ವಾಸವಾಗಿರುವ ನವಾಝ್ ಅ ಹಮ್ಮದ್ (25), ಕರಾಯ ಜನತಾ ಕಾಲನಿ ನಿವಾಸಿ ದಿ. ಸೈಯ್ಯದ್ ಪೂಕೋಯ ತಂಜಳ್ ಎಂಬವರ ಪುತ್ರ ಯು. ನಿಜಾಮ್ ಯಾನೆ ಸೈಯದ್ ನಿಜಾಂ ತಂಜಳ್ (27), ಇಳಂತಿಲ ಗ್ರಾಮದ ಕಡವಿನ ಬಾಗಿಲು ನಿವಾಸಿ ಅಬ್ದುಲ್ ಖಾದರ್ ಎಂಬವರ ಪುತ್ರ, ಪ್ರಸ್ತುತ ಕರಾಯ ಪೆಟ್ರೋಲ್ ಬಂಕ್ ಬಳಿಯ ಬಾಡಿಗೆ ಮನೆಯಲ್ಲಿ ವಾಸವಿರುವ ಸರ್ಫ್‌ರಾಜ್ (24) ಎಂಬವರು ಬಂಧಿತ ಆರೋಪಿಗಳು.
ಘಟನೆಯ ವಿವರ: 2021ರ ಜ.14ರಂದು ಕಲ್ಲೇರಿ ಎಂಬಲ್ಲಿ ಬೇಕರಿ ವ್ಯವಹಾರ ನಡೆಸುತ್ತಿದ್ದ ಕೆ.ಎನ್.ಶರತ್‌ಕುಮಾರ್ ಎಂಬವರ ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ ಮನೆಯ ಮುಂಭಾಗದ ಬಾಗಿಲನ್ನು ಮುರಿದು ಒಳನುಗ್ಗಿದ ಕಳ್ಳರು ಅಲ್ಲಿ ಕಪಾಟಿನಲ್ಲಿದ್ದ 3.81 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 14 ಸಾವಿರ ರೂ. ನಗದು ದೋಚಿಪರಾರಿಯಾಗಿದ್ದರು. ಶರತ್ ಅವರು ಬೇಕರಿಯಲ್ಲಿದ್ದ ಸಮಯದಲ್ಲಿ ರಾತ್ರಿ 7 ರಿಂದ 9.30ರ ಮಧ್ಯೆ ಈ ಕಳ್ಳತನ ನಡೆಸಲಾಗಿದ್ದು, ಕಳ್ಳರು ಮನೆಯ ವಿದ್ಯುತ್ ಸಂಪರ್ಕವನ್ನು ತಪ್ಪಿಸಿ ಮನೆಯ ಮುಂಭಾಗದ ಎರಡು ವಿದ್ಯುತ್ ದೀಪಗಳನ್ನು ಒಡೆದು ಹಾಕಿದ್ದರು. ಅಲ್ಲದೇ, ಆ ದಿನ ಮಕರ ಸಂಕ್ರಮಣವಾಗಿದ್ದರಿಂದ ಸಂಪ್ರದಾಯದಂತೆ ಮನೆಯವರು ದೇವರ ಮುಂದೆ ನಗದು ಇಟ್ಟು ಪೂಜೆ ಮಾಡಿದ್ದರು. ಮನೆಯೊಳಗೆ ನುಗ್ಗಿದ ಕಳ್ಳರು ಅಲ್ಲಿದ್ದ ಬೆಳ್ಳಿಯ ದೀಪಗಳನ್ನು ಕಳವುಗೈದರಾದರೂ, ಅಲ್ಲಿದ್ದ ನಗದನ್ನು ಮುಟ್ಟಿರಲಿಲ್ಲ. ಮನೆಯಲ್ಲಿದ್ದ ಕಪಾಟು
ಗಳನ್ನು ಜಾಲಾಡಿ ಅಲ್ಲಿದ್ದ ನಗ- ನಗದು ದೋಚಿದರು. ಶರತ್ ಅವರ ಪತ್ನಿ ಕಾನೂನು ಪದವೀಧರೆಯಾಗಿದ್ದು, ಅವರ ಪದವಿಗೆ ಸಂಬಂ
ಧಿಸಿದ ಸರ್ಟಿಪಿಕೇಟ್‌ಗಳು, ಇತರ ದಾಖಲೆಗ
ಳಿದ್ದ ಬ್ಯಾಗನ್ನೇ ಕದ್ದೊಯ್ದಿದ್ದ ಕಳ್ಳರುಮನೆಯಿಂ
ದ ಸುಮಾರು200ಮೀಟರ್ ದೂರದಲ್ಲಿ ಅದನ್ನು ಬೆಂಕಿ ಹಚ್ಚಿ ಸುಟ್ಟು ಹಾಕಿ ಹೋಗಿದ್ದರು.
ಅಲ್ಲದೇ, ಕಳವು ನಡೆಸಿ ಹೋಗುವಾಗ ಪೋಲಿಸರಿಗೆತಮ್ಮ ಬೆರಳಚ್ಚು ಗುರುತು ಪತ್ತೆಯಾಗದಂತೆ ಮನೆಬಚ್ಚಲು
ಮನೆಯಲ್ಲಿ ಕೈಕಾಲು ತೊಳೆದು ಹೋಗಿದ್ದರು.
ಶರತ್ ಅವರು ರಾತ್ರಿ ಬೇಕರಿಗೆ ಬಾಗಿಲು ಹಾಕಿ
ವಾಪಸ್ ಬಂದಾಗಲೇ ಇಲ್ಲಿ ಕಳ್ಳತನವಾಗಿದ್ದ ವಿಷಯಬೆಳಕಿಗೆ ಬಂದಿತ್ತು.

ನಿಮ್ಮದೊಂದು ಉತ್ತರ