ಇಂದಿರಾ ಜ್ಯೋತಿ ಶಕ್ತಿ ಸಾಮಾರಸ್ಯ ರಥಯಾತ್ರೆ- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ
ಲಾಯಿಲ: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಗ್ರಾಮೀಣ ಮತ್ತು ನಗರ ಸಮಿತಿ ಬೆಳ್ತಂಗಡಿ ಇದರ ವತಿಯಿಂದ ಡಿ.17 ರಂದು ಲಾಯಿಲ ಪ್ರಸನ್ನ ಕಾಲೇಜು ಆವರಣದಲ್ಲಿ ನಡೆಯುವ ಕಬ್ಬಡ್ಡಿ ಪಂದ್ಯಾಟ ಹಾಗೂ ಹಗ್ಗಜಗ್ಗಾಟ ಪಂದ್ಯಾಟವನ್ನು ಮತ್ತು ಕಾಂಗ್ರೇಸ್ ಕಾರ್ಯಕರ್ತರ ಸಮಾವೇಶ ಮತ್ತು ಇಂದಿರಾಜ್ಯೋತಿ ರಥ ಯಾತ್ರೆಗೆ ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕರು ಹಾಗೂ ಮಾನ್ಯ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರು ಚಾಲನೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಸರಕಾರ ವಿಧಾನ ಪರಿಷತ್ ಶಾಸಕರು ಮತ್ತು ದ.ಕ ಜಿಲ್ಲಾ ಕಾಂಗ್ರೇಸ್ ಸಮಿತಿ ಜಿಲ್ಲಾಧ್ಯಕ್ಷರಾದ ಹರೀಶ್ ಕುಮಾರ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಉಳ್ಳಾಲ ವಿಧಾನಸಭಾ ಕ್ಷೇತ್ರದ ಶಾಸಕರು ಮತ್ತು ಮಾಜಿ ಸಚಿವರಾದ ಯು.ಟಿ ಖಾದರ್, ಕರ್ನಾಟಕ ಸರಕಾರ ಮಾಜಿ ಸಚಿವರಾದ ರಮಾನಾಥ ರೈ,ಮಾಜಿ ಸಚಿವ ಗಂಗಾಧರ ಗೌಡ, ಮಾಜಿ ಶಾಸಕ ವಸಂತ ಬಂಗೇರ, ಪಕ್ಷದ ಪ್ರಮುಖರಾದ ಐವನ್ ಡಿಸೋಜ, ಜೆ.ಆರ್ ಲೋಬೋ, ಮೊಯಿದ್ದಿನ್ ಭಾವ, ಡಿ.ಇಬ್ರಾಹಿಂ, ಮಿಥುನ್ ರೈ, ಟಿ.ಎಂ. ಶಾಹೀದ್ ತೆಕ್ಕೀಲ್,
ರಾಜ್ ಶೇಖರ್ ಅಜ್ರಿ, ಬೆಳ್ತಂಗಡಿ ಬ್ಲಾಕ್ ಕಾಂಗ್ರೇಸ್ ಉಭಯ ಸಮಿತಿ ಅಧ್ಯಕ್ಷರುಗಳಾದ ರಂಜನ್ ಜಿ ಗೌಡ, ಶೈಲೇಶ್ ಕುಮಾರ್ ಪಕ್ಷದ ಹಿರಿಯ ಕಿರಿಯ ನಾಯಕರುಗಳು, ಕಾರ್ಯಕರ್ತರು ಬಾಗವಹಿಸಿದ್ದರು.
ಇದಕ್ಕೆ ಮೊದಲು ಬೆಳ್ತಂಗಡಿ ಬಸ್ ನಿಲ್ದಾಣ ಬಳಿಯಿಂದ ಪ್ರಸನ್ನ ಕಾಲೇಜು ತನಕ ಕಾಯ೯ಕತ೯ರ ಮೆರವಣಿಗೆ ನಡೆಯಿತು.