ಉಜಿರೆ: ಉಜಿರೆ ಸಮೀಪದ ನೀರ ಚಿಲುಮೆ ಎಂಬಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನೀರಚಿಲುಮೆಯ ನರ್ಸರಿಯ ಮಣ್ಣಿನ ಅಡಿಯಲ್ಲಿ ಡಿ.22ರಂದು ಬಿಳಿ ಬಣ್ಣದ 28 ಮೊಟ್ಟೆಗಳು ಇವೆ. .
ಗಿಡಗಳನ್ನು ಬೆಳೆಸಲು ರಾಶಿ ಹಾಕಿರುವ ಮಣ್ಣಿನ ಅಡಿಯಲ್ಲಿ ಮೊಟ್ಟೆಗಳನ್ನು ಹೊಂದಿದೆ. ಬೆಳಿಗ್ಗೆ ನರ್ಸರಿ ತೊಟ್ಟೆಗಳಿಗೆ ಮಣ್ಣನ್ನು ತುಂಬುತ್ತಿರುವ ವೇಳೆಯಲ್ಲಿ ಕೆಲಸಗಾರರು ಮೊಟ್ಟೆಯನ್ನು ಗುರುತಿಸಿದ್ದು ಇದನ್ನು ಗಮನಿಸಿದ ನರ್ಸರಿಯ ಯೋಜನಾಧಿಕಾರಿ ದಯಾನಂದ್ ಇವರು ಜನಜಾಗೃತಿ ಪ್ರಾದೇಶಿಕ ಕಚೇರಿಯ ವಿಪತ್ತು ನಿರ್ವಹಣಾ ವರದಿಯನ್ನು ನೀಡಿದ್ದರು. ವಿಪತ್ತು ನಿರ್ವಹಣಾ ಯೋಜನಾಧಿಕಾರಿ ಜೈವಂತ ಪಟಗಾರ ಇವರ ಸ್ಥಳಕ್ಕೆ ಭೇಟಿ ನೀಡಿ ಧರ್ಮಸ್ಥಳದ ಶೌರ್ಯ ಸಮಿತಿಯ ಮಾಸ್ಟರ್ ಹಾಗೂ ಉರಗ ಪ್ರೇಮಿ ಸ್ನೇಕ್ ಪ್ರಕಾಶ್ ಇವರಿಗೆ ಮಾಹಿತಿ ನೀಡಿದ್ದರು. ಬೆಳ್ತಂಗಡಿಯ ಊರ ಪ್ರೇಮಿ ಅಶೋಕ ಇವರಲ್ಲಿಯೂ ಈ ಬಗ್ಗೆ ಚರ್ಚಿಸಿ ಸುರಕ್ಷಿತವಾಗಿ ಸಂರಕ್ಷಿಸುವ ಬಗ್ಗೆ ಮಾಹಿತಿ ಪಡೆದಿದ್ದರು.
ಸರಿಯಾದ ಮಾಹಿತಿ ಪಡೆಯುವ ಉದ್ದೇಶದಿಂದ ಸ್ಥಳಕ್ಕೆ ಧಾವಿಸಿದ ಸ್ನೇಕ್ ಪ್ರಕಾಶ್ ಅವರು ಅರಣ್ಯ ಇಲಾಖೆ ಮಾಗದಶ೯ನಂತೆ ಪುತ್ತೂರಿನ ರವೀಂದ್ರ ನಾಥ್ ಐತಾಳ ಇವರಿಗೆ ಪತ್ತೆಯಾದ ಮೊಟ್ಟೆಗಳ ಮಾಹಿತಿ ನೀಡಿದಾಗ ಅವರು ಮೊಟ್ಟೆಗಳನ್ನು ಸುರಕ್ಷಿತವಾಗಿ ತಂಪಾದ ಮಣ್ಣಿನ ಅಡಿಯಲ್ಲಿ ಇಟ್ಟಿರಬೇಕು. ಸುಮಾರು 60-70 ದಿನದಲ್ಲಿ ಮೊಟ್ಟೆಗಳು ಮರಿಯಾಗುತ್ತವೆ. ಬಿಸಿಲು ಸ್ಥಳದಲ್ಲಿ ಇದ್ದಲ್ಲಿ ಮೊಟ್ಟೆಗಳು ಹಾಳಾಗಬಹುದು ಎಂದಿದ್ದರು. ಮತ್ತು ಸುರಕ್ಷಿತವಾಗಿ ಮೊಟ್ಟೆಯನ್ನು ತಂದು ಕೊಟ್ಟಲ್ಲಿ ಮರಿ ಮಾಡಿ ತಾವೇ ಬಿಡುವುದಾಗಿ ತಿಳಿಸಲಾಗಿದೆ. ಇದಕ್ಕೆ ಪೂರಕವಾದ ಸ್ನೇಕ್ ಪ್ರಕಾಶ್ ಇವರು ಮೊಟ್ಟೆಗಳನ್ನು ಪುತ್ತೂರಿಗೆ ಒಯ್ದು ಐತಾಳ ಇವರಿಗೆ ಕೊಟ್ಟು ಬಂದಿರುತ್ತಾರೆ. ಕೋಳಿ ಮೊಟ್ಟೆಯ ಗಾತ್ರಕ್ಕಿಂತ ಚಿಕ್ಕದಾದ ಉದ್ದನೆಯ ಮೊಟ್ಟೆ ಇದಾಗಿದ್ದರೆ , ಉಡದ ಮೊಟ್ಟೆ ಇರಬಹುದು ಎಂದು ಅಂದಾಜಿಸಲಾಗುತ್ತಿದೆ.