ಧಮ೯ಸ್ಥಳದ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ದಿ ಯೋಜನೆಯ ವಿಮಾ ವಿಭಾಗದ ವತಿಯಿಂದ ಸಂಪೂರ್ಣ ಸುರಕ್ಷ ಮತ್ತು ಆರೋಗ್ಯ ರಕ್ಷಾ ವಿಮಾ ಕಾರ್ಯಕ್ರಮದ ೧೯ನೇ ವರ್ಷದ ವಿಮಾ ನಮೀಕರಣದ ಮೊತ್ತ ರೂ.135 ಕೋಟಿಯ ಚೆಕ್ ವಿತರಣಾ ಕಾರ್ಯಕ್ರಮ ಮಾ. 31 ರಂದು ನಡೆಯಿತು
ಕಾರ್ಯಕ್ರಮದ ಸಭಾಧ್ಯಕ್ಷರಾದ ಎಸ್.ಡಿ.ಎಮ್ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್ ಉದ್ಘಾಟಿಸಿ ಬಡ ಕುಟುಂಬದ ಆರೋಗ್ಯ ಭದ್ರತೆಗಾಗಿ ಆರೋಗ್ಯ ವಿಮಾ ಅಗತ್ಯವಾಗಿದ್ದು , ಹಲವಾರು ಮಂದಿ ಇದರ ಪ್ರಯೋಜನ ಪಡೆದಿದ್ದಾರೆ. ಈ ಕಾಯ೯ಕ್ರಮ ಯಶಸ್ವಿಯಾಗಿ ಅನುಷ್ಠಾನ ಮಾಡಿದ ಯೋಜನೆ ಸಿಬ್ಬಂದಿಗಳನ್ನು ಅಭಿನಂದಿಸಿದರು.
ಕಾರ್ಯನಿವಾಹಕ ನಿರ್ದೇಶಕರಾದ ಎಲ್. ಎಚ್ ಮಂಜುನಾಥ್ ಪ್ರಸ್ತಾವಿಕ ಮಾತನಾಡಿದರು.
ಈ ಸಂಧರ್ಭದಲ್ಲಿ ನಮೀಕರಣದ ವಿಮಾ ಮೊತ್ತ ದ ಚೆಕ್ ನ್ನು ಹಸ್ತಾಂತರಿಸಲಾಯಿತು.
ಕಾರ್ಯಕ್ರಮದಲ್ಲಿ ಹಣಕಾಸು ನಿರ್ದೇಶಕರಾದ ಶಾಂತರಾಮ್ ಪೈ, ನ್ಯೂ ಇಂಡಿಯಾ ಇನ್ಯೂರೆನ್ಸ್‌ನ ಡಿ.ಜಿ.ಎಮ್ ಕೆ. ಪ್ರಕಾಶ್, ನ್ಯೂ ಇಂಡಿಯಾ ಇನ್ಯೂರೆನ್ಸ್‌ನ ಡಿವಿಜಿನ್ ಮೆನೇಜರ್ ಶ್ರೀಮತಿ ವೇದಾವತಿ, ಹೆಲ್ತ್ ಇಂಡಿಯಾ ಕಂಪೆನಿಯ ಬಿ.ಸಿ ಅಲೆಕ್ಸ್, ಗ್ಯಾಲಗಲ್ ವಿಮಾ ಕಂಪೆನಿಯ ವಿನಯಸ್ವಾಮಿ, ಯಶಸ್, ಇನ್ನಿತರ ಗಣ್ಯರು ಉಪಸ್ಥಿತರಿದ್ದರು. ಕಾರ್ಯನಿವಾಹಕ ನಿರ್ದೇಶಕರಾದ ಎಲ್. ಎಚ್ ಮಂಜುನಾಥ್ ಸ್ವಾಗತಿಸಿ, ವಿಮಾ ವಿಭಾಗದ ಪ್ರದೇಶೀಕ ನಿರ್ದೇಶಕರಾದ ಬಿ. ಜಯರಾಮ್ ನೆಲ್ಲಿತ್ತಾಯ ಧ್ಯನ್ಯವಾದವಿತ್ತರು.