ಮಡಂತ್ಯಾರು: 2020-21 ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಮಡಂತ್ಯಾರು ಗ್ರಾಮ ಪಂಚಾಯತ್ ಆಯ್ಕೆಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಒಟ್ಟು ಆಯ್ಕೆಯಾಗಿರುವ 7 ಗ್ರಾಮ ಪಂಚಾಯತ್ ಗಳಲ್ಲಿ ಬೆಳ್ತಂಗಡಿ ತಾಲೂಕಿನ ಮಡಂತ್ಯಾರು ಗ್ರಾ.ಪಂ. ಒಂದಾಗಿದೆ.
2020-21 ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕಾಗಿ ಗ್ರಾಮ ಪಂಚಾಯತ್ ಗಳ ಆಯ್ಕೆ ಕುರಿತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸೂಚನೆಯಂತೆ ಜಿಲ್ಲಾ ಪಂಚಾಯತ್ ಅಧಿಕಾರಿಗಳು (ತಾಲೂಕು ಪಂಚಾಯತ್ ನೋಡಲ್ ಅಧಿಕಾರಿಗಳು) ಸಂಬಂಧಪಟ್ಟ ಗ್ರಾಮ ಪಂಚಾಯತ್ ಗಳಿಗೆ ಭೇಟಿ ನೀಡಿ ವಿವಿಧ ಯೋಜನೆಗಳು, ಸಾಧನೆಗಳು, ದಾಖಲೆಗಳನ್ನು ಪರಿಶೀಲಿಸಿ ವರದಿ ಸಲ್ಲಿಸಿದ್ದು, ಜಿಲ್ಲಾ
ಸಮಿತಿಯಲ್ಲಿ ಚರ್ಚಿಸಿಈ ಆಯ್ಕೆಯನ್ನು ಮಾಡಲಾಗಿದೆ.
ಸ್ವಚ್ಛ ತೆ , ಪಂಚಾಯತ್ ವ್ಯಾಪ್ತಿಯ ಕಾಮಗಾರಿಗಳು, ಉದ್ಯೋಗ ಖಾತರಿಯಲ್ಲಿ ಮಾಡಿರುವ ಸಾಧನೆ ಸೇರಿದಂತೆ ಪಂಚಾಯತ್ ವ್ಯಾಪ್ತಿಯ ಅಭಿವೃದ್ಧಿ ಕಾಮಗಾರಿಗಳನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.