ಗ್ರಾಮಾಂತರ ಸುದ್ದಿ

ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘದಿಂದ ಸಹಾಯಧನದ ಚೆಕ್ ಹಸ್ತಾಂತರ*

ಬೆಳ್ತಂಗಡಿ ತಾಲೂಕು ಓಡಿಲ್ನಾಳ ಗ್ರಾಮದ ಅದೇಲು ಮನೆಯ ದಿವಂಗತ *ಧರ್ಣಪ್ಪ ಮೂಲ್ಯ* ಇವರು *ಕೊರೋನ* ಸಾಂಕ್ರಾಮಿಕ ರೋಗದಿಂದ ಮೃತ ಪಟ್ಟಿರುತ್ತಾರೆ. ಇವರ ಕುಟುಂಬದವರ ಪರಿಸ್ಥಿಯನ್ನು ಗಮನಿಸಿದ ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘ (ರಿ) ಗುರುವಾಯನಕೆರೆ ಇದರ ಅಧ್ಯಕ್ಷರ, ಕುಲಾಲ ಕುಂಬಾರ ಯುವ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ *ಶ್ರೀ ಹರೀಶ್ ಕಾರಿಂಜ* ಇವರ ಮನವಿಯಂತೆ ಮೃತರ ಪತ್ನಿ ಶ್ರೀಮತಿ *ಯಶೋದಾ* ಮತ್ತು ಇವರ ಮಕ್ಕಳಾದ ಕುಮಾರಿ *ಧನ್ಯಶ್ರೀ* ಮತ್ತು *ವಿದ್ಯಾಶ್ರೀ* ಕುಟುಂಬಕ್ಕೆ *ಕರ್ನಾಟಕ ರಾಜ್ಯ ಕುಂಬಾರ ಸರಕಾರಿ ನೌಕರರ ಕ್ಷೇಮಭಿವೃದ್ಧಿ ಸಂಘ* ಹಾಗೂ *ಬೆಂಗಳೂರು ಕುಲಾಲ ಸಂಘ (ರಿ)* ಇವರಿಂದ ತಲಾ *ಐದು ಸಾವಿರದಂತೆ ಒಟ್ಟು ಹತ್ತು ಸಾವಿರ* ರೂಪಾಯಿಯನ್ನು  *ಹರೀಶ್ ಕಾರಿಂಜ* ಹಸ್ತಾಂತರ ಮಾಡಿದರು. ಈ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕು ಸಂಘದ ಸಕ್ರೀಯ ಸದಸ್ಯರೂ ಹಿರಿಯ ಮಾರ್ಗದರ್ಶಕರಾದ *ಹೆಚ್ ಪದ್ಮಕುಮಾರ್* ಬೆಳ್ತಂಗಡಿ, ತಾಲೂಕು ಕುಲಾಲ ಕುಂಬಾರ ಯುವ ವೇದಿಕೆಯ ನಿಯೋಜಿತ ಅಧ್ಯಕರಾದ *ಉಮೇಶ್ ಕುಲಾಲ್*, ತಾಲೂಕು ಸಂಘದ ಕೋಶಾಧಿಕಾರಿ *ವಸಂತ ಕುಲಾಲ್* ಹೆಬೇಬೈಲು, ತಾಲೂಕು ಸಂಘದ ಸಮಿತಿ ಸದಸ್ಯರಾದ *ಪುಷ್ಪರಾಜ್ ಕುಲಾಲ್* ಲಾಯಿಲ, ನಿವೃತ ಅರಣ್ಯ ಪಾಲಕರದ *ಮುತ್ತಪ್ಪ ಕುಲಾಲ್* ಸುದೇಮುಗೇರು, *ಮಾಧವ ಮೂಲ್ಯ* ಶಿರ್ಲಾಲ್, *ಪ್ರಕಾಶ್* ಪಾಂಡೇಶ್ವರ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸಹಕಾರ ಮಾಡಿದ ಬೆಂಗಳೂರಿನ ಉಭಯ ಸಂಘಗಳಿಗೆ ತಾಲೂಕು ಸಂಘದ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸಲಾಯಿತು.

ನಿಮ್ಮದೊಂದು ಉತ್ತರ