ಬೆಳ್ತಂಗಡಿ: 75ನೇ ಸ್ವಾತಂತ್ರೋತ್ಸವದ ಅಂಗವಾಗಿ ಶಾಸಕ ಹರೀಶ್ ಪೂಂಜ ಅವರ ನೇತೃತ್ವದಲ್ಲಿ ಆನ್ಲೈನ್ನಲ್ಲಿ ಹಮ್ಮಿಕೊಂಡ ದೇಶ ಭಕ್ತಿ ಗೀತೆಯಲ್ಲಿ ಬೆಳ್ತಂಗಡಿ ತಾಲೂಕಿನ 3500ಮಂದಿಯಲ್ಲದೆ ಹೊರ ತಾಲೂಕು, ಜಿಲ್ಲೆ, ದೇಶ, ವಿದೇಶಗಳಿಂದ ಸುಮಾರು 5 ಸಾವಿರ ಮಂದಿ ಭಾಗವಹಿಸಿದ್ದು, ಇದು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಎಂಬ ದಾಖಲೆಯನ್ನು ನಿರ್ಮಿಸಿದೆ.
ಈ ದಾಖಲೆ ನಿರ್ಮಾಣದ ಬಗ್ಗೆ ಸರ್ಟಿಫೀಕೆಟ್ ಹಸ್ತಾಂತರ ಕಾರ್ಯಕ್ರಮ ಸ್ವಾತಂತ್ರೋತ್ಸವದ ಶುಭ ದಿನವಾದ ಆ.೧೫ರಂದು ಬೆಳ್ತಂಗಡಿ ಎಸ್.ಡಿ.ಎಂ ಸಭಾಂಗಣದಲ್ಲಿ ನಡೆಯಿತು. ಗೋಲ್ಡನ್ ಬುಕ್ ಆಪ್ ವರ್ಲ್ಡ್ ರೆಕಾರ್ಡ್ ಇದರ ಏಷ್ಯಾದ ಮುಖ್ಯಸ್ಥ ಡಾ. ಮನಿಷ್ ವೈಷ್ಣವಿ ಡೆಲ್ಲಿ ಅವರು ಶಾಸಕ ಹರೀಶ್ ಪೂಂಜ ಅವರಿಗೆ ಸರ್ಟೀಫೀಕೆಟ್ನ್ನು ಹಸ್ತಾಂತರಿಸಿದರು. ಈ ಸಂದರ್ಭ ಮಾತನಾಡಿದ ಶಾಸಕರು ಬೆಳ್ತಂಗಡಿ ತಾಲೂಕು ಅಲ್ಲದೆ, ದೇಶ, ವಿದೇಶಗಳಿಂದ ಸುಮಾರು ೫ ಸಾವಿರಕ್ಕೂ ಮಿಕ್ಕಿ ಜನರು ಭಾಗವಹಿಸಿದ್ದು, ಇದು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಆಗಿದೆ. ಇದು ನನ್ನ ಒಬ್ಬನ ಸಾಧನೆಯಲ್ಲ, ಇದು ತಾಲೂಕಿನ ಜನರ ಸಾಧನೆಯಾಗಿದೆ ಎಂದರು.
ಡಾ. ಮನೀಷ್ ಅವರು ಮಾತನಾಡಿ ತಾನು ಎರಡನೇ ಬಾರಿಗೆ ಬೆಳ್ತಂಗಡಿ ತಾಲೂಕಿಗೆ ಆಗಮಿಸುತ್ತಿದ್ದೇನೆ. ಶಾಸಕರ ನೇತೃತ್ವದಲ್ಲಿ ನಡೆದ ಆನ್ಲೈನ್ ದೇಶ ಭಕ್ತಿ ಗೀತೆ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ನಿರ್ಮಿಸಿದೆ. ಈ ಹಿಂದೆ 1ಸಾವಿರ ಮಂದಿ ಹಾಡಿದ ದೇಶ ಭಕ್ತಿ ಗೀತೆ ವರ್ಲ್ಡ್ ರೆಕಾರ್ಡ್ ಆಗಿತ್ತು. ಈ ಬಾರಿ ಸುಮಾರು 3ಸಾವಿರ ಮಂದಿ ಹಾಡಿರುವುದು ಈ ದಾಖಲೆಯನ್ನು ನಿರ್ಮಿಸಿದೆ ಎಂದರು.
ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯತು ಅಧ್ಯಕ್ಷೆ ರಜನಿ ಕುಡ್ವ, ಉಪಾಧ್ಯಕ್ಷ ಜಯಾನಂದ ಗೌಡ, ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. ಪ್ರಶಾಂತ ಶೆಟ್ಟಿ ಸ್ವಾಗತಿಸಿದರು. ಸ್ಮೀತೇಶ್ ಎಸ್. ಬಾರ್ಯ ಕಾರ್ಯಕ್ರಮ ನಿರೂಪಿಸಿ, ಅನಿಷ್ ಅಮೀನ್ ಧನ್ಯವಾದವಿತ್ತರು