ಬೆಳ್ತಂಗಡಿ: ಅಬ್ಬಿ ಜಲಪಾತ ವೀಕ್ಷಣೆಗಾಗಿ ಬೆಂಗಳೂರಿನಿಂದ ಆಗಮಿಸಿದ್ದ ೧೭ ಮಂದಿ ಇದ್ದ ಕುಟುಂಬವೊಂದ ಐದು ವರ್ಷದ ಮಗು ಶ್ರೇಯಾ ಬಿದ್ದು ಗಾಯಗೊಂಡ ಘಟನೆ ಆ.೧೪ರಂದು ಮಧ್ಯಾಹ್ನ ಸಂಭವಿಸಿದೆ. ಚಾರಣಿಗರು ಮೂಡಿಗೆರೆ ತಾಲೂಕು ಬಾಳೂರು ಬಳ್ಳಾಲರಾಯನದುರ್ಗ ಕಡೆಯಿಂದ ಅಬ್ಬಿ ಜಲಪಾತದ ಕಡೆಗೆ ಬಂದಿದ್ದರು. ಈ ವೇಳೆ ಬಳಗದಲ್ಲಿದ್ದ ಐದು ವರ್ಷದ ಮಗು ಶ್ರೇಯಾ ಪಾಚಿಗಟ್ಟಿದ ಕಲ್ಲಿನ ಮೇಲೊಂದರಿಂದ ಅಲ್ಪ ಆಳಕ್ಕೆ ಜಾರಿ ಬಿದ್ದರು. ಈ ವೇಳೆ ಅವರ ಮುಖ, ತಲೆಗೆ ಗಾಯವಾಗಿದೆ. ತಕ್ಷಣ ಅವರನ್ನು ಕುಟುಂಬಿಕರೇ ಮೇಲೆತ್ತಿಕೊಂಡು ಅತ್ತ ಬಾಳೂರು ಕಡೆಗೇ ಮರಳಿದ್ದಾರೆ .ಕಾಲ್ನಡಿಗೆ ದಾರಿ ಮುಗಿದ ಬಳಿಕ ಮಗುವನ್ನು ವಾಹನದ ಮೂಲಕ ಆಸ್ಪತ್ರೆಗೆ ಕರೆದೊಯ್ಯಬೇಕಾಗಿದೆ. ಸ್ಥಳಕ್ಕೆ ಬೆಳ್ತಂಗಡಿ ತಾಲೂಕಿನ ಕಡೆಯಿಂದ ಅಗ್ನಿಶಾಮಕ ದಳದ ಸಿಬ್ಬಂದಿಗಳು, ಬೆಳ್ತಂಗಡಿ ಠಾಣೆಯ ಪೊಲೀಸರು ಭೇಟಿ ನೀಡಿದ್ದಾರೆ.