ಗುರುವಾಯನಕೆರೆ: ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘ ಗುರುವಾಯನಕೆರೆ ಇದರ ಕುಲಾಲ ಮಂದಿರಕ್ಕೆ 16 ರಂದು ಬೆಳಿಗ್ಗೆ ಬಹಾರೈನ್ ಕುಲಾಲ ಸಂಘದ ಅಧ್ಯಕ್ಷರು, ತುಳುನಾಡ ಕಣ್ಮಣಿ ಗಣೇಶ್ ಕುಲಾಲ್ ಮಾಣಿಲ ಇವರು ಭೇಟಿ ನೀಡಿ ಔಪಚಾರಿಕವಾಗಿ ಮಾತುಕತೆ ನಡೆಸಿದರು.
ಸಂಘದ ಸಂಪ್ರದಾಯದಂತೆ ಅವರನ್ನು ಪ್ರೀತಿಯಿಂದ ಸ್ವಾಗತಿಸಿ ಗೌರವದಿಂದ ಸನ್ಮಾನಿಸ
ಲಾಯಿತು.ಈ ಸಂದರ್ಭದಲ್ಲಿ ಅವರು ಮಾತನಾಡುತ್ತಾ ಬೆಳ್ತಂಗಡಿ ತಾಲೂಕು ಸಂಘ ಉತ್ತಮ ಸಂಘಟನೆ, ಗ್ರಾಮೀಣ ಜನತೆಯ ಸೇವೆ, ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ, ಕ್ರಿಯಾಶೀಲ ಅಧ್ಯಕ್ಷರ ಸಾಮೂಹಿಕ ನಾಯಕತ್ವ, ಇಟ್ಟಿರುವ ಯೋಚನೆ-ಯೋಜನೆ, ಪಧಾದಿಕಾರಿಗಳ, ಸದಸ್ಯರ ಸಹಕಾರ, ಜೇನುಗೂಡಿನಂತ ಒಗ್ಗಟ್ಟನ್ನು ಕಂಡು ಸಂತಸವಾಯಿತು ಎಂದು ಹೇಳಿದರು. ನಿಮ್ಮ ಉತ್ತಮ ಕಾರ್ಯಕ್ಕೆ ಸದಾ ಸ್ಪಂದಿಸುತ್ತೇನೆ ಎಂಬ ಭರವಸೆ ನೀಡಿದರು.
ಈ ಸಂಧರ್ಭದಲ್ಲಿ ಅಧ್ಯಕ್ಷರಾದ ಹರೀಶ್ ಕಾರಿಂಜ, ಕಾರ್ಯದರ್ಶಿ ಸಂತೋಷ್ ಭಾರ್ಗವಿ, ಜತೆ ಕಾರ್ಯದರ್ಶಿ ಉಮೇಶ್ ಕುಲಾಲ್, ನಿರ್ದೇಶಕರಾದ ಶ್ರೀಮತಿ ದಯಾಮಾಧವ
ಹಾಗೂ ಮೆನೇಜರ್ ಮುಖೇಶ್ ಕುಲಾಲ್ ಉಸ್ಥಿತರಿದ್ದರು.