ಬೆಳ್ತಂಗಡಿ: ಬ್ಲಾಕ್ ಕಾಂಗ್ರೆಸ್ ಸಮಿತಿ ಬೆಳ್ತಂಗಡಿ ನಗರ ಮತ್ತು ಗ್ರಾಮೀಣ ಘಟಕ ಇದರ ವತಿಯಿಂದ ಅಗತ್ಯ ಸಾಮಾಗ್ರಿಗಳ ಮತ್ತು ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಉಜಿರೆಯ ಪಿ.ಸಿ.ಪೈ ಪೆಟ್ರೋಲ್ ಕೇಂದ್ರದ ಬಳಿಯಿಂದ ಬೆಳ್ತಂಗಡಿ ಹಳೆಕೋಟೆಯ ಇಂಡಿಯನ್ ಆಯಿಲ್ ಪೆಟ್ರೋಲಿಯಂ ಕೇಂದ್ರದವರೆಗೆ ಎತ್ತಿನ ಗಾಡಿ ಸಹಿತ ಬೃಹತ್ ಪ್ರತಿಟನಾ ಪಾದಯಾತ್ರೆ ಹಾಗೂ ಸೈಕಲ್ ಜಾಥಾ ಜು.೭ ರಂದು ನಡೆಯಿತು.
ಮಾಜಿ ಶಾಸಕ ವಸಂತ ಬಂಗೇರ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ, ದೇಶದಲ್ಲಿ ಪೆಟ್ರೋಲ್ ಬೆಲೆ ೧೦೦ ನಾಟೌಟ್ ಆಗಿ, ರೂ. ೧೦೫ರವರೆಗೆ ಏರಿದೆ. ಸದ್ಯದಲ್ಲೇ ಡಿಸೇಲ್ ೧೦೦ ರೂ. ಆಗುತ್ತದೆ. ಗ್ಯಾಸ್‌ಬಲೆ ೯೨೫ ಏರಿದೆ. ಆದರೆ ಯಾರೂ ಇದರ ಬಗ್ಗೆ ಮಾತನಾಡುತ್ತಿಲ್ಲ, ತೈಲ ಬೆಲೆ ಹಾಗೂ ಇತರ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ದೇಶದಲ್ಲಿ ಬಡ ಜನತೆ ಬದುಕು ಸಂಕಷ್ಟಕ್ಕೆ ಸಿಲುಕಿದ್ದು, ಕೇಂದ್ರ ಹಾಗೂ ರಾಜ್ಯ ಸರಕಾರ ಕೂಡಲೇ ತೈಲ ಬೆಲೆಯನ್ನು ಇಳಿಸುವಂತೆ ಬಂಗೇರ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ಶೈಲೇಶ್ ಕುಮಾರ್ ಕುರ್ತೋಡಿ, ಗ್ರಾಮೀಣ ಅಧ್ಯಕ್ಷ ರಂಜನ್ ಜಿ. ಗೌಡ, ಪಕ್ಷದ ವಕ್ತಾರರಾದ ಕೇಶವ ಗೌಡ ಮತ್ತು ಮನೋಹರ್ ಕುಮಾರ್ ಇಳಂತಿಲ, ಕಿಸಾನ್ ಘಟಕದ ನಗರ ಅಧ್ಯಕ್ಷ ಸತೀಶ್ ಶೆಟ್ಟಿ ದೊಡ್ಡಮನೆ, ಗ್ರಾಮೀಣ ಅಧ್ಯಕ್ಷ ದಿನೇಶ್ ಬೆಳಾಲು, ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಜಗದೀಶ್ ಡಿ, ಪ್ರಮುಖ ನಾಯಕರುಗಳಾದ ನಮಿತಾ ಪೂಜಾರಿ, ಶೇಖರ ಕುಕ್ಕೇಡಿ, ವಸಂತ ಬಿ.ಕೆ, ಅಶ್ರಫ್ ನೆರಿಯ, ಅಯೂಬ್ ಡಿ.ಕೆ, ಅಭಿನಂದನ್ ಹರೀಶ್, ಜಯವಿಕ್ರಮ ಕಲ್ಲಾಪು, ರಾಜಶೇಖರ ಶೆಟ್ಟಿ ಮಡಂತ್ಯಾರು, ಪ್ರಶಾಂತ ವೇಗಸ್, ಉಷಾ ಶರತ್, ವಿನ್ಸೆಂಟ್ ಮಡಂತ್ಯಾರು, ವಿ.ಟಿ ಸೆಬಾಸ್ಟಿಯನ್, ನಾಮದೇವ ರಾವ್, ಅಬ್ದುಲ್ ರಹಿಮಾನ್ ಪಡ್ಪು, ಭರತ್ ಕುಮಾರ್ ಇಂದಬೆಟ್ಟು, ಮಧುಕರ ಸುವರ್ಣ ಬೆದ್ರಬೆಟ್ಟು, ಸೆಭಾಸ್ಟಿನ್ ಕಳೆಂಜ, ಇಸುಬು ಇಳಂತಿಲ, ಪ್ರವೀಣ್ ನಡ, ಮಂಜುನಾಥ ಕಾಮತ್, ಬಾಲಕೃಷ್ಣ ಗೌಡ
ಉಜಿರೆ, ಸಲೀಂ ಗುರುವಾಯನಕೆರೆ, ಹಸನಬ್ಬ ಚಾರ್ಮಾಡಿ, ಶ್ರೀಧರ ಪೂಜಾರಿ ಉಜಿರೆ, ಅಯಾಝ್ ಚಾರ್ಮಾಡಿ, ದಯಾನಂದ ಬೆಳಾಲು, ಲಕ್ಷ್ಮಣ ಗೌಡ ಇಂದಬೆಟ್ಟು, ರವಿ ನೇತ್ರಾವತಿ ನಗರ, ಅರೆಕ್ಕಲ್ ಮಮ್ಮಿಕುಂಞ, ಸಂತೋಷ್ ವಳಂಬ್ರ, ಸಂದೀಪ್ ನೀರಲ್ಲೆ, ನಾರಾಯಣ ಗೌಡ ದೇವಸ್ಯ, ಶಾಲಿನಿ, ಕಸ್ತೂರಿ ಕೇಶವ್, ಶಾಲಿನಿ ಮುಂಡಾಜೆ, ಜಯಂತ ಗೌಡ ಓನಿಯಾಲು, ನಿತ್ಯಾನಂದ ರೈ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.