ಬಾರ್ಯ ಪ್ರಾ.ಕೃ.ಪ.ಸ ಸಂಘ ಮೂರುಗೋಳಿ ಇದರ ಮಹಾಸಭೆಯು ಸೆ.21ರಂದು ಸಂಘದ ವರಾರ ಬಾರ್ಯ ಗ್ರಾ.ಪಂ. ಸಭಾಭವನದಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ಪ್ರಸನ್ನ ಗೌಡ.ಯನ್ ರವರ ಅಧ್ಯಕ್ಷತೆಯಲ್ಲಿ ಜರಗಿತು.
ಸಂಘವು ಎರಡು ಗ್ರಾಮಗಳ ಕಾರ್ಯವ್ಯಾಪ್ತಿಯನ್ನು ಹೊಂದಿದ್ದು 2021-22 ನೇ ಸಾಲಿನಲ್ಲಿ ಸದಸ್ಯರಿಗೆ37.70 ಕೋಟಿ ಸಾಲ ವಿತರಿಸಿದ ವರ್ಷಾಂತ್ಯಕ್ಕೆ 43.66ಕೋಟಿ ಹೊರಬಾಕಿ ಸಾಲ ಹೊಂದಿದ್ದು ಹಾಗೂ ಸದಸ್ಯರ ಸಹಕಾರದಿಂದ 16.21 ಕೋಟಿ ಠೇವಣಿ ಇದೆ. ಸಂಘವು ಸತತ 20 ವರ್ಷಗಳಿಂದ ಲೆಕ್ಕಪರಿಶೋಧನೆಯಲ್ಲಿ ‘ಎ’ ಶ್ರೇಣಿಯನ್ನು ಹೊಂದಿದೆ. ವರ್ಷಾಂತ್ಯಕ್ಕೆ 3.87 ಕೋಟಿ ಪಾಲು ಭಂಡವಾಳ ಹಾಗೂ 192.47ಕೋಟಿ ವ್ಯವಹಾರ ಮಾಡಿ 78.81 ಲಕ್ಷ ಲಾಭ ಗಳಿಸಿದೆ. ಶೇಕಡಾ 10.5ರಂತೆ ಡಿವಿಡೆಂಡ್ ನೀಡಲಾಗುವುದು. ಸಂಘದ ಶಾಖೆಯ ಪಿಲಿಗೂಡಿನಲ್ಲಿ ಲಾಕರ್ ಸೌಲಭ್ಯದೊಂದಿಗೆ ಸಂಪೂರ್ಣ ಸೇವೆಯನ್ನು ಸೆಪ್ಟೆಂಬರ್ 26 ರಿಂದ ಪ್ರಾರಂಭಿಸಲಾಗಿದೆ. ಸಂಘವು ಸದಸ್ಯರ ಸಂಪೂರ್ಣ ಸಹಕಾರದಿಂದ ಉತ್ತಮರೀತಿಯಿಂದ ಸೇವೆಯನ್ನು ನೀಡುತ್ತಿದೆ ಎಂದು ಹೇಳಿದರು.
ಸಮಾಜದಲ್ಲಿ ಸೇವೆ ಸಲ್ಲಿಸುತ್ತಿರುವ ಡಾ|| ಯಾಕುಬು, ಡಾ| ಗಣಪತಿಭಟ್, ಮತ್ತು ಶ್ರೀ ಪ್ರಸನ್ನ ಇಂಜಿನಿಯರ್ ಮೆಸ್ಕಾಂ ಕಲ್ಲೇರಿ ಇವರನ್ನು ಸನ್ಮಾನಿಸಲಾಯಿತು
ಸಭೆಯಲ್ಲಿ ದ.ಕ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ನಿರ್ದೇಶಕರಾದ ನಿರಂಜನ್ ಭಾವಂತಬೆಟ್ಟು ಭಾಗವಹಿಸಿ,. ಸಂಘದ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ. ಸಂಘದಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವ ಮತ್ತು ಸಮಾಜ ಸೇವೆಗಾಗಿ ಸಂಘದ ಅಧ್ಯಕ್ಷರಾದ ಪ್ರಸನ್ನ ಗೌಡ.ಯನ್ ಇವರಿಗೆ ಸಂಘದ ಸದಸ್ಯರು ಸನ್ಮಾನಿಸಿದರು.
ಎಸ್.ಎಸ್.ಎಲ್.ಸಿ. ಪಿ.ಯು.ಸಿ ಪದವಿ ನಂತರ ಸ್ಕಾಲರ್ ಶಿಪ್ ನೀಡಲಾಯಿತು.
ಸದಸ್ಯರಾದ ಜೆರಾಮ್ ಬಾಗ್, ಮೋನಪ್ಪ ಗೌಡ ಮನಿಲ, ಕೃಷ್ಣಪ್ಪ ಪೂಜಾರಿ ಪನ್ರ್ದ, ಗಣೇಶ್ ಬೆದ್ರಾಡಿ, ಮನೋಹರ್ ಶೆಟ್ಟಿ, ಉಸ್ಮಾನ್ ಕಲ್ಲಕಟ್ಟ ಬ್ಯಾಂಕಿನ ಅಭಿವೃದ್ಧಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕು. ಕನ್ನಿಕಾ ಸಾಂತ್ಯಳ್ಳಿ ಪ್ರಾರ್ಥನೆ ಹಾಡಿದರು.
ಸಂಘದ ಮುಖ್ಯಕಾರ್ಯನಿರ್ವ
ಹಣಾಧಿಕಾರಿ ಸತೀಶ್ ಗೌಡ.ಟಿ ಲೆಕ್ಕ ಪತ್ರ ಮಂಡಿಸಿದರು. ಸಂಘದ ಉಪಾಧ್ಯಕ್ಷರಾದ ಪ್ರವೀಣ್. ಸ್ವಾಗತಿಸಿದರು. ನಿರ್ದೇಶಕರಾದ ರಾಜೇಶ್ ರೈ ಧನ್ಯವಾದವಿತ್ತರು. ಸಂಘದ ನಿರ್ದೇಶಕರಾದ ಪ್ರತಾಪ್ , ಶೇಷಪ್ಪ ಸಾಲಿಯಾನ್, ಅಶ್ರಫ್, ಅಣ್ಣು ಪಿ, ಶಿವರಾಮ, ಪಾಶ್ವನಾಥ್ ಜೈನ್, ಶ್ರೀಮತಿ ಲಿಡಿಯಾ ಬ್ರಾಗ್, ಶ್ರೀಮತಿ ಸವಿತಾ, ವೃತ್ತಿಪರ ನಿರ್ದೇಶಕರಾದ ಕಿರಣ್ ಡಿ.ಶೆಟ್ಟಿ, ಶೇಖ ಬೋಳಡ್ಕ ಇತರರು. ಸಂಘದ ಸಿಬ್ಬಂದಿಗಳಾದ ಶಾಖಾ ಮ್ಯಾನೇಜರ್ ಶಶಿಧರ ಅಡಪ, ಲೆಕ್ಕಿಗ ಶ್ರೀಮತಿ ರೋಹಿಣಿ.ಜಿ., ನವೀನ್ ಕುಮಾರ್ ಎಂ, ಶ್ರೀಮತಿ ರತ್ನಾವತಿ, ವೆಂಕಪ್ಪ ಎ, ಪ್ರವೀಣ್ ಬಿ. ಹಾಗೂ ಧನುಶ್, ರಕ್ಷಿತ್ ಕುಮಾರ್, ಕು. ಅನುಶಾ, ಅಬೂಬಕರ್, ಶ್ರೀಧರ್, ಸರಾಫರಾದ ಹರಿಶ್ಚಂದ್ರ, ಕಳೆದಂತೆ ಗಾರರಾದ ವಸತಿ, ಶೇಖರೆ,, ನವೋದಯ ಪ್ರೇರಕರಾದ ಲೋಕೇಶ್, ಸರಾಫ ಹರೀಶ್, ಪಿಗ್ನಿ ಸಂಗ್ರಾಹಕರಾದ ಹೈದರ್ ಮತ್ತು ಯೋಗಿಶ್ ಸಹಕರಿಸಿದರು.