ಬೆಳಾಲು : ರಸ್ತೆ ದಾಟುವ ವೇಳೆ ಕಾರು ಡಿಕ್ಕಿಯಾಗಿ ಜಿಂಕೆಯಿರುವ ಉಪ್ಪಿನಂಗಡಿ ವಲಯ ಅರಣ್ಯ ವ್ಯಾಪ್ತಿಯ ಬೆಳಾಲು ಗ್ರಾಮದ ಬೈತಾಡಿಯಲ್ಲಿ ನಡೆದಿದೆ.
ಕಕ್ಕಿಂಜೆಯ ಸಿದ್ದಿಕ್ ಎಂಬವರು ಉಪ್ಪಿನಂಗಡಿ ಕಡೆಗೆ ಕಾರನ್ನು ಚಲಾಯಿಸಿಕೊಂಡು ಹೋಗುತ್ತಿದ್ದಾಗ ಹಠತ್ತಾನೆ ರಸ್ತೆ ದಾಟಲು ಜಿಗಿದ ಜಿಂಕೆ ಕಾರಿಗೆ ಡಿಕ್ಕಿಯಾಗಿ ಸ್ಥಳದಲ್ಲೇ ಸಾವನ್ನಪ್ಪಿದೆ.
ಜಿಂಕೆ ಸುಮಾರು 3 ವರ್ಷ ಪ್ರಾಯದ ಗಂಡು ಜಿಂಕೆ ಹೊಂದಿದ್ದು, ಪುತ್ತೂರು ಅರಣ್ಯ ಉಪ ವಿಭಾಗ ಎ.ಸಿ.ಎಫ್. ಕಾರ್ಯಪ್ಪ, ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಮಧುಸೂಧನ್, ಉಪ ಅರಣ್ಯಾಧಿಕಾರಿ ಪ್ರಶಾಂತ್, ಅರಣ್ಯ ರಕ್ಷಕ ವಿನಯ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಧಿಕಾರಿಗಳು ಜಿಂಕೆ ಮೃತದೇಹವನ್ನು ವಶಕ್ಕೆ ಪಡೆದು ಇಲಾಖಾ ವಿಧಿ ವಿಧಾನಗಳಂತೆ ಮಣ್ಣಗುಂಡಿ ಕಾಡಿನಲ್ಲಿ ಅಂತಿಮವಿಧಿಯನ್ನು ನೆರವೇರಿಸಿದ್ದಾರೆ.