ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಪರಿಸರದಲ್ಲಿ ಕೆಂಪು ಮಳೆಯಾದ ಪ್ರಕರಣ ವರದಿಯಾಗಿದ್ದು, ಇಲ್ಲಿಯ ಬ ಳ್ಳಿದಡ್ಡ ಮನೆಯ ಸೂರ್ಯನಾರಾಯಣ ಭಟ್ ಅವರು ಕೆಂಪು ಮಳೆಯ ನೀರನ್ನು ಸಂಗ್ರಹಿಸಿದ್ದಾರೆ.
ಕೆಂಪು ಮಳೆ ರಕ್ತ ಮಳೆ ತೀರ ಅಪರೂಪವಾದದ್ದು. ಮೇಲ್ಟಾವಣಿಯಿಂದ ಹರಿದು ಬಂದ ಮಳೆ ನೀರು ಮನೆಯಲ್ಲಿ ಬಕೆಟ್, ಡ್ರಮ್ ಗಳಲ್ಲಿ ಶೇಖರಣೆಯಾಗಿದ್ದು, ನೀರು ಕೆಂಪು ಬಣ್ಣದಲ್ಲಿ ಇರುವುದು ಬೆಳಕಿಗೆ ಬಂದಿದೆ.
ಈ ನೀರನ್ನು ಈಗಾಗಲೇ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಸೂರ್ಯನಾರಾಯಣ ಭಟ್ ತಿಳಿಸಿದ್ದಾರೆ. ಕೆಂಪು ಮಳೆ ನೀರಿನ ಬಗ್ಗೆ ಇನ್ನಷ್ಟೆ ವರದಿ ಬರಬೇಕಾಗಿದೆ.
ಈ ಬಗ್ಗೆ ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದ್ದು ವರದಿ ಬಂದ ಬಳಿಕ ಕೆಂಪು ಮಳೆಗೆ ಕಾರಣವೇನು ಎಂದು ತಿಳಿದು ಬರಬೇಕಿದೆ.