ಗ್ರಾಮಾಂತರ ಸುದ್ದಿ

ಮೆದುಳಿನ ರಕ್ತ ಸ್ರಾವ ಕೊಕ್ಕಡ ಗ್ರಾಮಕರಣಿಕ ರೂಪೇಶ್ ಆಸ್ಪತ್ರೆಗೆ ದಾಖಲು

ಬೆಳ್ತಂಗಡಿ: ಲಾಯಿಲ ನಿವಾಸಿ, ಕೊಕ್ಕಡ ಗ್ರಾಮ ಗ್ರಾಮಕರಣಿಕ ರೂಪೇಶ್(48.ವ) ರವರು ಮೆದುಳಿನ ರಕ್ತಸ್ರಾವದಿಂದ ಬಳಲಿ, ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.

ರೂಪೇಶ್ ರವರು ಬೆಳ್ತಂಗಡಿಯಲ್ಲಿ ವಾಸ್ತವ್ಯವಿದ್ದು, ಮಾ.18 ರಂದು ರಾತ್ರಿ ವೇಳೆ ಅಸ್ವಸ್ಥಗೊಂಡ  ಇವರನ್ನು ಕೂಡಲೇ ಚಿಕಿತ್ಸೆಗಾಗಿ ಮಂಗಳೂರಿನ ಅಸ್ಪತ್ರೆಗೆ ದಾಖಲಿಸಲಾಗಿತ್ತು.  ಗಂಭೀರ  ಸ್ಥಿತಿಯಲ್ಲಿರುವ ಇವರನ್ನು ಇದೀಗ ಉಡುಪಿಯ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗದೆ ಎಂದು ತಿಳಿದುಬಂದಿದೆ.

ಬೆಂಗಳೂರಿನಲ್ಲಿ ಗ್ರಾಮಕರಣಿಕರಾಗಿ ಸೇವೆ ಸಲ್ಲಿಸಿದ್ದ ರೂಪೇಶ್ ರವರು   ಕೊಕ್ಕಡಕ್ಕೆ ವರ್ಗಾವಣೆಗೊಂಡು ಪ್ರಸ್ತುತ  ಕೊಕ್ಕಡ, ಶಿಶಿಲ, ಶಿಬಾಜೆಯ ಗ್ರಾಮಕರಣಿಕರಾಗಿ ಕರ್ತವ್ಯನಿರ್ವಹಿಸುತ್ತಿದ್ದಾರೆ

ನಿಮ್ಮದೊಂದು ಉತ್ತರ