ಮಚ್ಚಿನ: ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದ ಮಾಜಿ ಅನುವಂಶಿಕ ಆಡಳಿತ ಮುಕ್ತೇಸರ ಶ್ರೀಪತಿರಾವ್ ಸಂಪಿಗೆತ್ತಾಯ(76ವ) ಇವರು ಮಾ. 23 ಬುಧವಾರ ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿರುತ್ತಾರೆ.
ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಪದವೀಧರರಾದ ಶ್ರೀಯುತರು ಮಡಂತ್ಯಾರ್ ಮಂಡಲ ಪಂಚಾಯತ್ ನ ಪ್ರಥಮ ಪ್ರಧಾನರು, ಮಚ್ಚಿನ ಗ್ರಾಮದ ಮಾಜಿ ಪಟೇಲರು, ಮಚ್ಚಿನ ವ್ಯವಸಾಯ ಸೇವಾ ಸಹಕಾರಿ ಸಂಘದ ಮಾಜಿ ಅಧ್ಯಕ್ಷರು, ಬೆಳ್ತಂಗಡಿ ಲಯನ್ಸ್ ಕ್ಲಬ್ ನ ಮಾಜಿ ಅಧ್ಯಕ್ಷರು, ಪುಂಜಾಲಕಟ್ಟೆ ಪದವಿ ಪೂರ್ವ ಕಾಲೇಜಿನ ಅಭಿವೃದ್ಧಿ ಸಮಿತಿಯ ಮಾಜಿ ಕಾರ್ಯಾಧ್ಯಕ್ಷರೂ, ಬಳ್ಳಮಂಜ ಶೇಷ -ನಾಗ ಕಂಬಳ ಸಮಿತಿಯ ಗೌರವಾಧ್ಯಕ್ಷರೂ ಆಗಿದ್ದರು. ಪ್ರಗತಿಪರ ಕೃಷಿಕರು ಆಗಿದ್ದ ಇವರು ಅನಂತೇಶ್ವರ ರೈಸ್ ಮಿಲ್ ನ ಮಾಲೀಕ ರಾಗಿದ್ದರು. ದಿವಂಗತರು ಪತ್ನಿ, ಪುತ್ರ ನ್ಯಾಯವಾದಿ ಬದರಿನಾಥ ಸಂಪಿಗೆತ್ತಾಯ ಮತ್ತು ಮೂರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿರುತ್ತಾರೆ.