ಗ್ರಾಮಾಂತರ ಸುದ್ದಿ

ಬಂಟರ ಯಾನೆ ನಾಡವರ ಸಂಘ ಬೆಳ್ತಂಗಡಿ ಇದರ ನೂತನ ಆಡಳಿತ ಕಚೇರಿಯ ಉದ್ಘಾಟನೆ

ಬೆಳ್ತಂಗಡಿ: ಬಂಟರ ಯಾನೆ ನಾಡವರ ಸಂಘ ಬೆಳ್ತಂಗಡಿ ಇದರ
ನೂತನ ಆಡಳಿತ ಕಚೇರಿಯ ಉದ್ಘಾಟನೆ ಸಮಾರಂಭ
ಅಕ್ಟೋಬರ್ 10ರಂದು ಗುರುವಾಯನಕೆರೆಯ.ಬಂಟರಭವನದಲ್ಲಿ ಜರಗಿತು.
ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಮೋಹನ್ ಆಳ್ವರವರುಬೆಳ್ತಂಗಡಿ ಬಂಟರ ಯಾನೆ ನಾಡವರ ಸಂಘದ ನೂತನ ಆಡಳಿತ ಕಚೇರಿಯನ್ನು ಉದ್ಘಾಟಿಸಿದರು. 
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಂಡ ಬೆಳ್ತಂಗಡಿ
ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಪುಷ್ಪರಾಜ ಶೆಟ್ಟಿ
ವಹಿಸಿದ್ದರು .
ಮುಖ್ಯ ಅತಿಥಿಗಳಾಗಿ ವಿಜಯ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದ
ಜಯರಾಮ್ ಶೆಟ್ಟಿ.ಬಂಟರ ಯಾನೆ ನಾಡವರ ಸಂಘದ ಉಪಾಧ್ಯಕ್ಷ ರಾಜೇಶ್ ಶೆಟ್ಟಿ ನವಶಕ್ತಿ. ಕಾರ್ಯದರ್ಶಿ ರಾಜು ಶೆಟ್ಟಿ ಬೆಂಗೆತ್ಯಾರು. ಮಹಿಳಾ
ವಿಭಾಗದ ಅಧ್ಯಕ್ಷೆ ಸಾರಿಕಾ ಶೆಟ್ಟಿ, ಯುವ ವಿಭಾಗದ ಅಧ್ಯಕ್ಷ
ಕಿರಣ್ ಕುಮಾರ್ ಶೆಟ್ಟಿ. ಉಪಸ್ಥಿತರಿದ್ದರು.
ಇತ್ತೀಚೆಗೆ ಸ್ವಚ್ಛತಾ ಕಾರ್ಯಕ್ಕೆ ಸ್ವಚ್ಛತಾ ಹಿ.ಸೇವಾ ಪುರಸ್ಕಾರ
ಪಡೆದ ಪ್ರಕಾಶ್ ಶೆಟ್ಟಿ ನೊಚ್ಚವರನ್ನು ಮತ್ತು ಗ್ರಾಮ
ಪಂಚಾಯತಿಯಲ್ಲಿ ಆಯ್ಕೆಯಾದ ಸಮುದಾಯದ
ಜನಪ್ರತಿನಿಧಿಗಳನ್ನು ಗೌರವಿಸಲಾಯಿತು .ರಘುರಾಮ ಶೆಟ್ಟಿ
ಸಾಧನ ಉಜಿರೆ ಕಾರ್ಯಕ್ರಮ ನಿರೂಪಿಸಿ, ಕೋಶಾಧಿಕಾರಿ
ಪ್ರಕಾಶ್ ಶೆಟ್ಟಿ ಸ್ವಾಗತಿಸಿ, ಜತೆ ಕಾರ್ಯದರ್ಶಿ ಸುರೇಶ್ ಶೆಟ್ಟಿ
ಲಾಯಿಲ ವಂದಿಸಿದರು .

ನಿಮ್ಮದೊಂದು ಉತ್ತರ