ಕ್ರೈಂ ವಾರ್ತೆ

ಪುತ್ತೂರಿಗೆ ಕೆಲಸಕ್ಕೆ ಹೋದ ಗೇರುಕಟ್ಪೆ ವ್ಯಕ್ತಿ ನಾಪತ್ತೆ

ಬೆಳ್ತಂಗಡಿ: ಪುತ್ತೂರುನ ತಾಯಿ ಮನೆಗೆ ಕೆಲಸಕ್ಕೆ ಹೋದ ಗೇರುಕಟ್ಪೆ ವ್ಯಕ್ತಿಯೋವ೯ರು ನಾಪತ್ತೆಯಾಗಿರುವುದಾಗಿ ಅವರ ಪತ್ನಿ ಅ.11ರಂದು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕಳಿಯ ಗ್ರಾಮದ ಕಲ್ಕು
ರ್ಣಿಮನೆ,ನಿವಾಸಿ ,ದಯಾನಂದ ಗೌಡ(45 ವರ್ಷ) ನಾಪತ್ತೆ ಯಾದವರು. ಅವರ ಪತ್ನಿ ಶ್ರೀಮತಿ ಅನಿತಾ ಕೆ. ಅವರು ಈ ದೂರನ್ನು ನೀಡಿದ್ದಾರೆ.
ದಯಾನಂದ ಗೌಡ ಅವರು ಅ.10 ರಂದು ಬೆಳಿಗ್ಗೆ 8 ಗಂಟೆಗೆ ತನ್ನ ತಾಯಿ ಮನೆಯಾದ ಪುತ್ತೂರು ತಾಲೂಕಿನ ಈಶ್ವರ ಮಂಗಲದ ಕೊಪ್ಪಳ ಎಂಬಲ್ಲಿಗೆ ಕೆಲಸದ ನಿಮಿತ್ತ ಹೋಗಿದ್ದು , ವಾಪಾಸು ಮನೆಗೆ ಬಾರದೆ ಸಂಬಂಧಿಕರ ಮನೆಗೂ ಹೋಗದೆ ಅವರ ಮೊಬೈಲ್ ಗೆ
ಕರೆ ಮಾಡಲು ಪ್ರಯತ್ನಿಸಿದರೂ ಯಾವುದೇ ಪ್ರತಿಕ್ರಿಯೆ ಸಿಗದೇ ನಾಪತ್ತೆಯಾಗಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಕಾಣೆಯಾದ ದಯಾನಂದ ಗೌಡರನ್ನು ಎಲ್ಲಾ ಕಡೆ ಹುಡುಕಾಡಲಾಗಿ ಪತ್ತೆಯಾಗದೇ ಇರುವುದರಿಂದ ತಡವಾಗಿ ಠಾಣೆಗೆ ಬಂದು ದೂರು ನೀಡಲಾಗಿದೆ. ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಮದೊಂದು ಉತ್ತರ