ಬೆಳ್ತಂಗಡಿ ತಾಲೂಕು ಬೀಡಿ ಗುತ್ತಿಗೆದಾರರ ಹಾಗೂ ಕಾರ್ಮಿಕರ ಪ್ರಸ್ತುತ ಇರುವ ಸಮಸ್ಯೆಗಳ ಕುರಿತು ಬೀಡಿ ಗುತ್ತಿಗೆದಾರರಲ್ಲಿ ಶಾಸಕ ಹರೀಶ ಪೂಂಜ ಅವರು ಸಂವಾದ ಕಾರ್ಯಕ್ರಮ ನಡೆಸಿದರು. ಈ ಸಂದರ್ಭದಲ್ಲಿ ಬೀಡಿ ಗುತ‌್ತಿಗೆದಾರರಾದ.ಶಿವಾನಂದ ರಾವ್ ಕಕ್ಕೆನಾಜೆ, ರಫಾಯಲ್ ಪಡಂಗಡಿ ಅವರು ಬೀಡಿ ಗುತ್ತಿಗೆದಾರರ ಮತ್ತು ಕಾರ್ಮಿಕರ ವಿವಿಧ ಸಮಸ್ಯೆಗಳ ಬಗ್ಗೆ ಶಾಸಕರ ಗಮನಕ್ಕೆ ತಂದರು. ಈ ಕುರಿತು ಶಾಸಕರು ಬೀಡಿ ಗುತ್ತಿಗೆದಾರರಿಗೆ ಭರವಸೆಯನ್ನುನೀಡಿ,ನಿಮ್ಮಲ್ಲಿರುವಜಿಲ್ಲಾಮಟ್ಟದ ಸಂಘದ ಪ್ರಮುಖರಲ್ಲಿ ಚರ್ಚೆ ಮಾಡಿ ಸಮನ್ವಯದಿಂದ ಸಮಸ್ಯೆಗಳ ಪಟ್ಟಿ ಮಾಡಿ
ನೀಡುವಂತೆ ಗುತ್ತಿಗೆದಾರರಲ್ಲಿ ತಿಳಿಸಿ, ನಿಮಗಿರುವ ಸಮಸ್ಯೆಗಳ ಬಗ್ಗೆ ಕಾರ್ಮಿಕ ಇಲಾಖೆಯ ಉನ್ನತ ಅಧಿಕಾರಿಗಳು ಮತ್ತು ಬೀಡಿ ಕಂಪೆನಿಯ ಮಾಲಕರೊಂದಿಗೆ ಸಮನ್ವಯ ಸಭೆ ಏರ್ಪಡಿಸಿ ಪರಿಹಾರ ಒದಗಿಸಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.. ಈ ಸಂದರ್ಭದ ಉಪಸ್ಥಿತರಿದ್ದ BMS ನ ಹಿರಿಯ ನಾಯಕರಾದ ವಿಶ್ವನಾಥ್ ಶೆಟ್ಟಿ ಮಾತನಾಡಿ ಭಾರತೀಯ ಮಜ್ದೂರ್ ಸಂಘವು ಬೀಡಿ ನಿಷೇಧ ಆಗುವ ಸಂದರ್ಭದಲ್ಲಿ ಸರಕಾರ ಮತ್ತು ಸುಪ್ರೀಂ
ಕೋರ್ಟ್ ಹಾಗೂ ಹೈಕೋರ್ಟ್ ಗಳಲ್ಲಿ ನಡೆಸಿದ ಹೋರಾಟಗಳು ಮತ್ತು ಅದರಲ್ಲಿ ಸಿಕ್ಕಿದ ಬೀಡಿ ಕಾರ್ಮಿಕರಿಗೆ ಸಿಕ್ಕಿದ ಫಲವನ್ನು ವಿವರಿಸಿ ಬೀಡಿ ಕಾರ್ಮಿಕರ ಅಥವಾ ಇತರೆ ಯಾವುದೇ ವಿಭಾಗದ ಕಾರ್ಮಿಕರನ್ನು BMS ಸಂಘ ಪ್ರತಿಭಟನೆಯ ಹೆಸರಿನಲ್ಲಿ ಶೋಷಿ
ಸುವುದಿಲ್ಲ. ಇದನ್ನು ಗುತ್ತಿಗೆದಾರರು ಮನ
ಗಾನಬೇಕು ಎಂದು ಸೂಚ್ಯವಾಗಿ ಸೂಚಿಸಿ
ದರು, ಈ ಸಂದರ್ಭ BMS ನ ತಾಲೂಕು ಅಧ್ಯಕ್ಷ ಉದಯ. ಬಿ. ಕೆ ಹಾಗೂ BMS ನ ಕಾರ್ಯದರ್ಶಿ ಜಯರಾಜ್ ಸಾಲಿಯನ್ ಉಪಸ್ಥರಿದ್ದರು. ಜಯರಾಜ್ ಸಾಲಿಯಾನ್ ಸ್ವಾಗತಿಸಿ. ನಿರೂಪಿಸಿ, ವಂದಿಸಿದರು.