ಗ್ರಾಮಾಂತರ ಸುದ್ದಿ

ಕೊಕ್ಕಡ ವಲಯದ ಜನಜಾಗೃತಿ ಗ್ರಾಮ ಸಮಿತಿ ಸಭೆ

ಕೊಕ್ಕಡ: ಬೆಳ್ತಂಗಡಿ ತಾಲೂಕಿನ ಕೊಕ್ಕಡ ವಲಯದ ಸಮುದಾಯ ಭವನದಲ್ಲಿ ಜನಜಾಗೃತಿ
ಗ್ರಾಮ ಸಮಿತಿ ಸಭೆಯನ್ನು ವಲಯ ಜನಜಾಗೃತಿ ಮಾಜಿ ಅಧ್ಯಕ್ಷ ಚೆನ್ನಪ್ಪ ಗೌಡ ಅಧ್ಯಕ್ಷತೆಯಲ್ಲಿ ಮೋಹನ ಗೌಡ ಮತ್ತು ಆರ್ಯಭಟ ಪ್ರಶಸ್ತಿ ಪುರಸ್ಕೃತ ಡಾ. ಮೋಹನದಾಸ್ ಗೌಡ ರವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ಗ್ರಾಮ ಸಮಿತಿ ಸಮಿತಿ ದ್ಯೆಯೋದ್ದೇಶ, ಅನಧಿಕೃತ ಮದ್ಯ ಮಾರಾಟ, ಕಾನೂನು ಬಾಹಿರ ಚಟುವಟಿಕೆ, ಗ್ರಾಮ ಸಮಿತಿ ಚಟುವಟಿಕೆ, ಗ್ರಾಮ ಸುಭಿಕ್ಷೆ ಕಾರ್ಯಕ್ರಮ, ಮಧ್ಯವರ್ಜನ ಶಿಬಿರ, ಸ್ವಾಸ್ಥ್ಯ ಸಂಕಲ್ಪಕಾರ್ಯಕ್ರಮ, ಸಮಿತಿ ಸದಸ್ಯರ ಜವಾಬ್ದಾರಿ, ನವಜೀವನ ಸಮಿತಿ ಪುನಶ್ಚೇತನ-ಬಲವರ್ಧನೆ, ಸ್ವ ಉದ್ಯೋಗ ತರಬೇತಿ ಮತ್ತು ಯೋಜನೆಯ ಮತ್ತು ಜನಜಾಗೃತಿ ವೇದಿಕೆಯ ಕಾರ್ಯಕ್ರಮದ ಬಗ್ಗೆ ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕ್ ಸವಿಸ್ತಾರವಾಗಿ ಮಾಹಿತಿ ನೀಡಿದರು. ಕೊಕ್ಕಡ ಗ್ರಾಮ ಸಮಿತಿಯ ಅದ್ಯಕ್ಷರಾಗಿ ಸಿದ್ದಪ್ಪ ಗೌಡ, ಉಪಾಧ್ಯಕ್ಷರಾಗಿ ರೈಮಂಡ್ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಸಮಿತಿ ಸಭೆಯಲ್ಲಿ ತಾಲೂಕು ಸಮಿತಿ ಸದಸ್ಯರಾದ ಶ್ರೀಮತಿ ಮಂಜುಳಾ ಕಾರಂತ್, ಕುಶಾಲಪ್ಪ ಗೌಡ, ಗ್ರಾಮದ ಒಕ್ಕೂಟದ ಅದ್ಯಕ್ಷ ಸೇಸಪ್ಪ ಮೂಲ್ಯ ಮತ್ತು ಸುಂದರ ನಾಯ್ಕ್, ಊರಿನ ಗಣ್ಯರು, ನವಜೀವನ ಸದಸ್ಯರು,  ಸೇವಾಪ್ರತಿನಿಧಿಗಳು ಹಾಜರಿ
ದ್ದರು. ಅನಿತಾ ಸ್ವಾಗತಿಸಿದರು, ಶಿಬಿರಾಧಿಕಾರಿ ನಾಗರಾಜ್ ವಂದಿಸಿದರು ಮೇಲ್ವಿಚಾರಕರಾದ ಮಮತಾ ಕಾರ್ಯಕ್ರಮ ನಿರ್ವಹಿಸಿದರು.

ನಿಮ್ಮದೊಂದು ಉತ್ತರ