ಗುರುವಾಯನಕೆರೆ: ಗುರುವಾಯನಕೆರೆ ಶೆಣೈ ರೆಸ್ಟೋರೆಂಟ್ ಗೆ ಚಹಾ ಕುಡಿಯಲು ಮೋದಿ ಬಂದರೇ ಎಂದು ನೀವು ಭಾವಿಸಿದರೆ ನಿಮ್ಮ ಊಹೆ ತಪ್ಪಾದಿತು…
ಇವರು ಪ್ರಧಾನಿ ಮೋದಿಯವರ ಕಟ್ಟಾ ಅಭಿಮಾನಿ ಕಾಕ೯ಳದ ಸದಾನಂದ ನಾಯಕ್ ಅವರು. ಮೋದಿಯವರ ಹಾಗೆಯೇ ಉಡುಗೆಯನ್ನು ಧರಿಸುವ ಇವರು ಧಮ೯ಸ್ಥಳಕ್ಕೆ ಹೋದವರು ಗುರುವಾಯನಕೆರೆಗೆ ಬಂದಿದ್ದು, ಎಲ್ಲರ ಗಮನ ಸೆಳೆದರು. ಕೆಲ ವಷ೯ಗಳ ಹಿಂದೆ ಉಜಿರೆಗೆ ಪ್ರಧಾನಿಯವರು ಬಂದಾಗ ಅವರ ಹಾಗೆ ಬಟ್ಟೆ ಧರಿಸಿ ಗಮನ ಸೆಳೆದಿದ್ದರು.