ಗ್ರಾಮಾಂತರ ಸುದ್ದಿ

ಭಾರತೀಯ ಮಜ್ದೂರ್ ಸಂಘ ತಾಲೂಕು ಸಮಿತಿ ಬೆಳ್ತಂಗಡಿ* ಇದರ ತಾಲೂಕು ಸಮಿತಿ ಹಾಗೂ ಗ್ರಾಮ ಪ್ರಮುಖರ ಸಭೆ

ಬೆಳ್ತಂಗಡಿ: *ಭಾರತೀಯ ಮಜ್ದೂರ್ ಸಂಘ ತಾಲೂಕು ಸಮಿತಿ ಬೆಳ್ತಂಗಡಿ* ಇದರ ತಾಲ್ಲೂಕು ಸಮಿತಿ ಹಾಗೂ ಗ್ರಾಮ ಪ್ರಮುಖರ ಸಭೆಯನ್ನು ಬಿಎಂಸ್ ತಾಲೂಕು ಸಮಿತಿ ಅಧ್ಯಕ್ಷರಾದ ಉದಯ ಬಿ. ಕೆರವರ ಅಧ್ಯಕ್ಷತೆಯಲ್ಲಿ ಶಾಸಕರ ಕಛೇರಿ ಶ್ರಮಿಕದ ವಠಾರದಲ್ಲಿ ನಡೆಸಲಾಯಿತು.ಈ ಸಭೆಯಲ್ಲಿ ಭಾರತೀಯ ಮಾಜ್ದೂರ್ ಸಂಘ ದ ಕಾರ್ಯ ವಿಸ್ತರಣೆ ಬಗ್ಗೆ ಚರ್ಚೆಸಿ ಸೂಕ್ತ ಸಲಹೆ ಸೂಚನೆಯನ್ನು ಪಡೆಯಲಾಯಿತು ನಂತರ ಬೆಳ್ತಂಗಡಿ ವಿಧಾನ ಸಭಾ ಶಾಸಕರಾದ ಹರೀಶ್ ಪೂಂಜ ಸಭೆಯನ್ನು ಉದ್ದೇಸಿಸಿ ಕಾರ್ಮಿಕರ ಹಿತ ರಕ್ಷಣೆಗೆ ವಿಶೇಷ

ಆದ್ಯತೆ ನೀಡುತೇನೆ ಸರಕಾರದ ಕಾರ್ಮಿಕ ರಿಗೆ ಆಹಾರ ಕಿಟ್ ನೀಡಲಿದ್ದು ನಮ್ಮ ತಾಲೂಕಿನ ಎಲ್ಲಾ ನೊಂದಯಿತಾ ಕಾರ್ಮಿಕರಿಗೆ ಕಿಟ್ ನೀಡಲು ಕಾರ್ಮಿಕ ಸಚಿವರಲ್ಲಿ ವಿನಂತಿಸಿದ ಮೇರೆಗೆ ಅವರು ಕೂಡಲೇ ಸ್ಪಂದಿಸಿ ಹೆಚ್ಚುವರಿ ಕಿಟ್ ನು ನೀಡಿರುತ್ತಾರೆ ಇದನ್ನು ಕೆಲವೇ ದಿನಗಲ್ಲಿ ಕಾರ್ಮಿಕರಿಗೆ ವಿತರಿಸಲಿದ್ದು ಕಾರ್ಮಿಕ ಕಿಟ್ ನು ಕಾರ್ಮಿಕರಿಗೆ ಹೊರೆಯಾಗದಂತೆ ಪ್ರತಿ ಗ್ರಾಮ ಮಟ್ಟದಲ್ಲಿ ತಲುಪಿಸಿ ವಿತರಿಸಲಾಗುವುದೆಂದು ಹೇಳಿದರು,ಬೆಳ್ತಂಗಡಿ ತಾಲೂಕ್ ನಲ್ಲಿ ಬಿಎಂಯಸ್ ಕಾರ್ಯಚಟುವಟಿಗೆ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು,ಸಭೆಯಲ್ಲಿ ಉಪಸ್ಥಿತರಿದ್ದ ವಿಧಾನ ಪರಿಷತ್ ಸದಸ್ಯರಾದ  ಪ್ರತಾಪ ಸಿಂಹ ನಾಯಕ್ ಅವರು ಮಾತನಾಡಿ ಬಿ.ಎಂ.ಎಸ್ ಬೆಳ್ತಂಗಡಿ ತಾಲೂಕಿನ ಕಾರ್ಯ ಚಟುವಟಿಕೆ ಶ್ಲಾಘಿಸಿದರು. ಮತ್ತು ಇನ್ನಷ್ಟು ಕಾರ್ಮಿಕ ವಿಭಾಗಗಳಲ್ಲಿ ಬಿ.ಎಂ.ಎಸ್ ಕೆಲಸ ಮಾಡಿ‌ ಕಾರ್ಮಿಕ ಹಿತ ಕಾಪಾಡಲಿ‌ ಎಂದು ಆಶಿಸಿದರು.

ಈ ಸಂದರ್ಭದಲ್ಲಿ ಬೆಳ್ತಂಗಡಿ ಯ ಬಿ.ಎಂ.ಎಸ್ ನ ಕಾರ್ಯದರ್ಶಿಯಾಗಿದ್ದ ಜಯರಾಜ್ ಸಾಲಿಯಾನ್ ಅವರು ಪ್ರಸ್ತುತ ಕರ್ನಾಟಕ ರಾಜ್ಯ ಬಿ.ಎಂ.ಎಸ್ ನ ಕಾರ್ಯದರ್ಶಿ ಯಾಗಿ ಅಯ್ಕೆಯಾಗಿರುವುದಕ್ಕೆ ಜಯರಾಜ್ ಸಾಲಿಯಾನ್ ಅವರನ್ನು ಹೂ ನೀಡಿ ಶಾಸಕರುಗಳು ಗೌರವಿಸಿದರು, ಸಭೆಯಲ್ಲಿ ಬಾಜಪ ಮಂಡಲ ಅಧ್ಯಕ್ಷರಾದ ಜಯಂತ್ ಕೋಟ್ಯಾನ್ ಹಾಗೂ ಬಿಎಂಸ್ ತಾಲೂಕು ಸಮಿತಿ ಯ ಮತ್ತು ಗ್ರಾಮ ಸಮಿತಿಗಳ ಪ್ರಮುಖರು ಉಪಸ್ಥಿತರಿದ್ದರು, ತಾಲೂಕು ಸಮಿತಿ ಕಾರ್ಯದರ್ಶಿ ಜಯರಾಜ್ ಸಾಲಿಯಾನ್ ಎಲ್ಲರನ್ನು ಸ್ವಾಗತಿಸಿ ಧನ್ಯವಾದ ನೀಡಿದರು.

ನಿಮ್ಮದೊಂದು ಉತ್ತರ