ಕುವೆಟ್ಟು: ಕುವೆಟ್ಟು ಗ್ರಾಮ ಪಂಚಾಯತದ ನಿವೃತ್ತ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಾಗಣ್ಣ ಚಟ್ನಳ್ಳಿ(68.ವ) ರವರು ಅಸೌಖ್ಯದಿಂದ ಮೇ.20 ರಂದು ನಿಧನರಾಗಿದ್ದಾರೆ.
ಮೂಲತಃ ಬಿಜಾಪುರ ನಿವಾಸಿಯಾಗಿರುವ ಇವರು ಕುವೆಟ್ಟು, ಬಾರ್ಯ, ಪಡಂಗಡಿ ಗ್ರಾಮ ಪಂಚಾಯತುಗಳಲ್ಲಿ ಹಲವು ವರ್ಷಗಳ ಕಾಲ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ, ನಂತರ ಕುವೆಟ್ಟು ಗ್ರಾ.ಪಂ ಅಭಿವೃದ್ಧಿ ಅಧಿಕಾರಿಯಾಗಿ ಪದೋನ್ನತಿಗೊಂಡು ಸೇವಾ ನಿವೃತ್ತಿ ಹೊಂದಿದ್ದರು. ಇವರು ತಮ್ಮ ಸೇವಾ ಅವಧಿಯಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಕಾರ್ಯಗಳಲ್ಲಿ ಉನ್ನತ ಸೇವೆ ಸಲ್ಲಿಸಿ, ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದರು.
ಮೃತರು ಪತ್ನಿ ಪಾರ್ವತಿ, ಪುತ್ರರಾದ ಬಸವರಾಜ್, ಸಂಗಮೇಶ್, ಮಹಂತೇಶ್, ಮಂಜುನಾಥ, ಓರ್ವ ಪುತ್ರಿ ರೇಷ್ಮಾ ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಬಂಧುವರ್ಗವದರನ್ನು ಅಗಲಿದ್ದಾರೆ.