ನಿಧನ ಸುದ್ದಿ

ನಿವೃತ್ತ ಶಿಕ್ಷಕ ಪ್ರಸನ್ನ ಕುಮಾರ್ ಶವ ಪತ್ತೆ

ಕಾಣೆಯಾಗಿದ್ದ ಪ್ರಸನ್ನ ಕುಮಾರ್ ರವರ ಮೃತ ದೇಹ ಬಿಸಿಲೆಘಾಟಿನಲ್ಲಿ ಪತ್ತೆ

ಉಜಿರೆ : ಇಲ್ಲಿಯ ರಾಮಕೃಷ್ಣ ನಗರದ ಪ್ರಸನ್ನ ಕುಮಾರ್(65ವ ) ಅ. 22 ರಂದು ಬೆಳಿಗ್ಗೆ 7.30ಕ್ಕೆ ಹಾಲು ತರಲೆಂದು ಹೋದವರು ನಾಪತ್ತೆ ಯಾಗಿದ್ದರು. ಇವರ ಮೃತ ದೇಹ ಇಂದು ಅ. 26ರಂದು ಸುಬ್ರಮಣ್ಯದ ಬಿಸಿಲೆ ಘಾಟ್ ನಲ್ಲಿ ಪತ್ತೆ ಯಾಗಿದೆ ಎಂದು ತಿಳಿದು ಬಂದಿದೆ. ಇವರು ಚಲಾಹಿಸುತ್ತಿದ್ದ ಬೈಕ್ ಸ್ಥಳದಲ್ಲಿ ಪತ್ತೆ ಯಾಗಿದ್ದು ಕುಟುಂಬ ವರ್ಗದವರು ಸ್ಥಳಕ್ಕೆ ತೆರಳಿದ್ದಾರೆ. ಇವರು ಕಾಣೆಯಾಗಿದ್ದಾರೆ ಎಂದು ಪತ್ನಿಅ. 23ರಂದು ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ನಿಮ್ಮದೊಂದು ಉತ್ತರ