ಬೆಳ್ತಂಗಡಿ: ದ.ಕ.ಜಿಲ್ಲೆ ಸೇರಿದಂತೆ ರಾಜ್ಯದ 8 ಜಿಲ್ಲೆಯಲ್ಲಿ ಇಂದು ಆ.6 ರಾತ್ರಿ 9.00 ಗಂಟೆಯಿಂದ ಸೋಮವಾರ ಆ.9 ಬೆಳಗ್ಗೆ 5.00 ಗಂಟೆಯವರೆಗೆ ಎರಡು ದಿನ ಕಟ್ಟುನಿಟ್ಟಿನ ವಾರಾಂತ್ಯದ ಕರ್ಪ್ಯೂ ಜಾರಿಗೊಳಿಸಿ ಸರಕಾರ ಆದೇಶ ನೀಡಿದೆ.
ಈ ಅವಧಿಯಲ್ಲಿ ಅವಶ್ಯಕ ಸೇವೆಗಳು, ತುರ್ತು ವೈದ್ಯಕೀಯ ಸೇವೆಗಳು, ಕೆಎಂಎಫ್ ಹಾಲಿನ ಬೂತ್, ದಿನಪತ್ರಿಕೆಗಳನ್ನು ಹೊರತು ಪಡಿಸಿ ಉಳಿದ ಎಲ್ಲ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಹಾಗೆಯೇ ಈ ವೇಳೆ ಜಿಲ್ಲಾ ವ್ಯಾಪ್ತಿಯಲ್ಲಿ ಬಸ್ ಸಂಚಾರಕ್ಕೆ ಅವಕಾಶವಿರುವುದಿಲ್ಲ. ಅಗತ್ಯ ಮತ್ತು ತುರ್ತು ಚಟುವಟಿಕೆಗಳನ್ನು ಹೊರತುಪಡಿಸಿ ಶುಕ್ರವಾರ ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಿಗ್ಗೆ 5 ಗಂಟೆಯವರೆಗೆ ವ್ಯಕ್ತಿಗಳ ಚಲನೆ ನಿಷೇಧಿ
ಸಲಾಗಿದೆ.