ಕ್ರೈಂ ವಾರ್ತೆ

ಉಜಿರೆ ಕಿರಿಯಾಡಿ ನಿವಾಸಿ ಕುಮಾರ ಗೌಡ ನಾಪತ್ತೆ

ಬೆಳ್ತಂಗಡಿ; ಉಜಿರೆ ಗ್ರಾಮದ ಕಿರಿಯಾಡಿ ನಿವಾಸಿ ಕುಮಾರ ಗೌಡ (54ವ.) ಎಂಬವರು ಜು.31 ರಿಂದ ನಿಗೂಢವಾಗಿ ನಾಪತ್ತೆಯಾಗಿರುವುದಾಗಿ ದೂರು ದಾಖಲಾಗಿದೆ.

ಅವರ ಪತ್ನಿ ವಾರಿಜಾ ದೂರು ನೀಡಿದ್ದು, ಪೇಟೆಗೆ ಹೋಗಿ ಬರುವುದಾಗಿ ತಿಳಿಸಿ ಹೋದವರು ಮರಳಿ ಬಂದಿಲ್ಲ ಎಂದು ತಿಳಿಸಿದ್ದಾರೆ. ಕನ್ನಡ ಮತ್ತು ತುಳು ಭಾಷೆ ಬಲ್ಲವರಾಗಿರುವ ಇವರ ಬಗ್ಗೆ ಮಾಹಿತಿ ಅರಿತರೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ತಿಳಿಸುವಂತೆ  ಇಲಾಖೆ ಪ್ರಕಟಣೆ ನೀಡಿದೆ.

ನಿಮ್ಮದೊಂದು ಉತ್ತರ