ಪುತ್ತೂರು: ಬೊಳುವಾರಿನಲ್ಲಿರುವ ವಸತಿ ಸಮುಚ್ಚಯವೊಂದರ ಮಹಡಿ ಮೇಲಿನಿಂದ ಬಾಲಕ
ಉರುಳಿಬಿದ್ದು ಗಂಭೀರವಾಗಿ ಗಾಯಗೊಂಡಿರುವ
ಘಟನೆ ಪುತ್ತೂರು ನಗರದ ಬೊಳುವಾರಿನಲ್ಲಿ ಅ.5
ರಂದು ಸಂಜೆ ನಡೆದಿದೆ.
ಪುತ್ತೂರಿನ ಮಂಜಲಪಡ್ಡುವಿನಲ್ಲಿರುವ ಸುದಾನ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಸುಶಾನ್ ರೈ ಗಾಯಗೊಂಡ ವಿದ್ಯಾರ್ಥಿ. ಈತ ಬೊಳುವಾರು ಉಳ್ಳಾಲ್ತಿ ಮಲರಾಯ ದೈವಸ್ಥಾನದ ಬಳಿಯ ನಿವಾಸಿ ಮನೋಹರ್ ರೈ ಎಂಬವರ ಪುತ್ರ. ಗಂಭೀರ ಗಾಯಗೊಂಡಿರುವ ಈತನನ್ನು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ
ಬೊಳುವಾರಿನಲ್ಲಿ ಕೀರ್ತನಾ ಅಪಾರ್ಟ್ ಮೆಂಟ್
ವಸತಿ ಸಮುಚ್ಚಯದಲ್ಲಿರುವ ಸ್ನೇಹಿತನ ಮನೆಗೆ ಸಂಜೆ ವೇಳೆ ಸುಶಾನ್ ರೈ ಬಂದಿದ್ದ ಎನ್ನಲಾಗುತ್ತಿದೆ. ಈ ವೇಳೆ ಈ ದುರ್ಘಟನೆ ನಡೆದಿದ್ದೂ ಹೆಚ್ಚಿನ ವಿವರಗಳು ಇನ್ನಷ್ಟೆ ಲಭಿಸಬೇಕಿದೆ.