ಬೆಳ್ತಂಗಡಿ : ಇಂದು ಬೆಳಗ್ಗಿನ ಜಾವ 4:30 ರ ಸುಮಾರಿಗೆ ಪುಂಜಾಲಕಟ್ಟೆ ಪಿಎಸ್ಐ ಸುಕೇತ್ ಸಿಬ್ಬಂದಿ ನವೀನ್, ಸಂದೀಪ್ ರೌಂಡ್ಸ್ ನಲ್ಲಿರುವಾಗ ವಾಮದಪದವು ಕುದ್ರೋಳಿ ಎಂಬಲ್ಲಿ ಅನುಮಾನಸ್ಪದವಾಗಿ ಬರುತ್ತಿದ್ದ ಗೂಡ್ಸ್ ವಾಹನ ನಿಲ್ಲಿಸಲು ಪಿಎಸ್‌ಐ ಸೂಚಿಸಿದ್ದಾರೆ. ಆದ್ರೆ ವಾಹನ ನಿಲ್ಲಿಸದೆ ಪಿಎಸ್‌ಐ ಅವರಿಗೆ ಡಿಕ್ಕಿ ಹೊಡೆದಿದೆ ನಂತರ ಸಿಬ್ಬಂದಿಗಳು ವಾಹನ ಅಡ್ಡಹಾಕಿದಾಗ ಆರೋಪಿಗಳು ಪರಾರಿಯಾಗಿದ್ದಾರೆ ,ವಾಹನದಲ್ಲಿದ್ದ ದನಗಳನ್ನು ವಶಕ್ಕೆ ಪಡೆದಿದ್ದಾರೆ. ಪಿಎಸ್‌ಐ ಸುಕೇತ್ ಅವರ ಕೈಗೆ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದ್ದಾರೆ.