ಬೆಳ್ತಂಗಡಿ: ಉಜಿರೆ ಗ್ರಾಮದ ಕಾಫಿಡೆ ಹೊಟೇಲ್ ನ ಕಟ್ಟಡದ ಹಿಂಬದಿ ಯಲ್ಲಿ ಪಾರ್ಕ್ ಮಾಡಿ ಬೈಕ್ ನ್ನು ಕಳ್ಳರು ಕಳವುಗೈದ ಘಟನೆ ವರದಿಯಾಗಿದೆ.
ಎ.11 ರಂದು ಬೆಳಿಗ್ಗೆ 8.45ಕ್ಕೆ ಕಳಂಜ ಗ್ರಾಮದ ಕಾಯ೯ತ್ತಡ್ಕ ಹಂಕರಜಾಲು
ನಿವಾಸಿ ಚಂದ್ರಶೇಖರ್ ಎಂಬವರು ತಮ್ಮ
ಮೋಟಾರ್ ಸೈಕಲ್ ( ಕೆಎ 21 ಕೆ 7974)ನ್ನು
ಉಜಿರೆ ಗ್ರಾಮದ ಕಾಫಿಡೆ ಹೊಟೇಲ್ ನ ಕಟ್ಟಡದ ಹಿಂಬದಿ ಯಲ್ಲಿ ಪಾರ್ಕ್ ಮಾಡಿ ಹೋಗಿದ್ದು, 10-20ಕ್ಕೆ ವಾಪಾಸು ಬಂದು ನೋಡಿದಾಗ ಪಾರ್ಕ್ ಮಾಡಿದಲ್ಲಿ ಬೈಕ್ ಇಲ್ಲದೇ, ಯಾರೋ ಕಳ್ಳರು ಬೈಕನ್ನು ಕಳವು ಮಾಡಿ ಕೊಂಡು ಹೋಗಿದ್ದಾರೆ ಎಂದು ಧಮ೯ಸ್ಥಳ ಪೊಲೀಸರಿಗೆ ದೂರು ನೀಡಿದ್ದಾರೆ.
ಕಳವಾದ ಮೋಟಾರ್ ಸೈಕಲ್ ನ ಮೌಲ್ಯ ರೂ 10 ಸಾವಿರ ಆಗಬಹುದು ಎಂದು ಅಂದಾಜಿಸಲಾಗಿದೆ. ಮೋಟಾರ್ ಸೈಕಲ್ ನ್ನು ಎಲ್ಲಾ ಕಡೆ ಹುಡುಕಾಡಿ ಪತ್ತೆ ಯಾಗದೇ ಇರುವುದರಿಂದ ಎ.21ರಂದು ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದಾರೆ.