ಕ್ರೈಂ ವಾರ್ತೆ

ಉಪ್ಪಿನಂಗಡಿ: ರಸ್ತೆಬದಿಯ ತಡೆಗೋಡೆಗೆ ಢಿಕ್ಕಿ ಹೊಡೆದ ಲಾರಿ ಚಾಲಕ ಸಾವು

ಉಪ್ಪಿನಂಗಡಿ: ಸಿಮೆಂಟು ಹೇರಿಕೊಂಡು
ಬರುತ್ತಿದ್ದ ಲಾರಿಯೊಂದು ರಸ್ತೆ ಬದಿಯ
ತಡೆಗೋಡೆಗೆ ಢಿಕ್ಕಿ ಹೊಡೆದು ಲಾರಿ ಚಾಲಕ
ಮೃತ ಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 75 ರ
ಕೆಂಪುಹೊಳೆ ಸಮೀಪ ನಡೆದಿದೆ.

ಲಾರಿ ರಸ್ತೆ ಬದಿಯ ತಡೆಗೋಡೆಗೆ ಢಿಕ್ಕಿ ಹೊಡೆದ ಪರಿಣಾಮ ಚಾಲಕ ಸ್ಥಳದಲ್ಲೇ ಮೃತ
ಪಟ್ಟಿದ್ದು, ನಿರ್ವಾಹಕ ಗಂಭೀರವಾಗಿ
ಗಾಯಗೊಂಡಿದ್ದು, ಸಕಲೇಶಪುರ ಆಸ್ಪತ್ರೆಗೆ
ದಾಖಲಿಸಲಾಗಿದೆ.

ಮೃತ ಚಾಲಕನನ್ನು ಮಂಜು ಗೌರಿ ಬಿದನೂರು ಎಂದು ಗುರುತಿಸಲಾಗಿದ್ದು ಕ್ರೇನ್ ಸಹಾಯದಿಂದ ಲಾರಿಯನ್ನು ತೆರವುಗೊಳಿಸಲಾಗಿದೆ.

ನಿಮ್ಮದೊಂದು ಉತ್ತರ