ಕ್ರೈಂ ವಾರ್ತೆ

ತೋಟಕ್ಕೆ ಗೋಣಿ ಚೀಲದಲ್ಲಿ ಗೊಬ್ಬರ ಹೊತ್ತು ಕೊಂಡು ಹೋಗುತ್ತಿದ್ದ ಮಹಿಳೆ ಜಾರಿ ಬಿದ್ದು ಮೃತ್ಯು

ಬೆಳ್ತಂಗಡಿ: ತೋಟಕ್ಕೆ ಗೋಣಿ ಚೀಲದಲ್ಲಿ ಗೊಬ್ಬರ ಹೊತ್ತುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಕಾಲು ಜಾರಿ ಬಿದ್ದ ಮಹಿಳೆಯೋವ೯ರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಆ.5 ರಂದು ಗಡಾ೯ಡಿಯಲ್ಲಿ ಸಂಭವಿಸಿದೆ.
ಗರ್ಡಾಡಿ ಗ್ರಾಮದ ಕುಂಡದಬೆಟ್ಟು ನಿವಾಸಿ
ಶ್ರೀಮತಿ ಶೋಭಾ (40 ವರ್ಷ) ಮೃತಪಟ್ಟವರು.
ಶ್ರೀಮತಿ ಶೋಭಾ ಅವರು ಗರ್ಡಾಡಿ ಗ್ರಾಮದ ಕುಂಡದಬೆಟ್ಟು ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು , ಗರ್ಡಾಡಿಯ ಕುಬಳಬೆಟ್ಟು ಶಿವಶಂಕರ ಭಟ್ ರವರ ಮನೆಗೆ ತೋಟದ ಕೃಷಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಆ.3. ರಂದು ಸುಮಾರು 11 ಗಂಟೆಗೆ ಶೋಭಾರವರು ಶಿವಶಂಕರ ಭಟ್‌ರವರ ತೋಟದ ಕೃಷಿ ಕೂಲಿ ಕೆಲಸಕ್ಕೆ ಹೋಗಿ ತೋಟಕ್ಕೆ ಗೊಬ್ಬರ ಹಾಕಲು ಗೊಬ್ಬರ ತುಂಬಿದ ಗೋಣಿಚೀಲವನ್ನು ಹೊತ್ತು
ಕೊಂಡು ಹೋಗುವ ಸಮಯ ಆಕಸ್ಮಿಕವಾಗಿ ಕಾಲುಜಾರಿ ಅಂಗಳದಲ್ಲಿ ಗೊಬ್ಬರ ತುಂಬಿದ ಗೋಣಿ ಚೀಲ ಸಮೇತವಾಗಿ ಬಿದ್ದು ಗಂಭೀರ ಗಾಯಗೊಂಡಿದ್ದರು. ಕೂಡಲೇ ಅವರನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಆ 5ರಂದು ರಂದು ಮಧ್ಯಾಹ್ನ ಮೃತ ಪಟ್ಟರು.
ಈ ಬಗ್ಗೆ ಕಾರ್ಕಳ ತಾಲೂಕು ಬಜಗೋಳಿ ಮುಂಡಾರು ಗ್ರಾಮದ ಗಾಂದಗುಡ್ಡೆ ನಿವಾಸಿ ಮೃತರ ಸಹೋದರ ಹರೀಶ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

 

ನಿಮ್ಮದೊಂದು ಉತ್ತರ