ಕ್ರೈಂ ವಾರ್ತೆ

ಮದುವೆ ವಿಷಯ ಪ್ರಸ್ತಾಪಿಸಿ ಕತ್ತಿಯಿಂದ ಹಲ್ಲೆ: ಇಬ್ಬರಿಗೆ ಗಾಯ

ಬೆಳ್ತಂಗಡಿ: ಮಗಳನ್ನು ಮದುವೆ ಮಾಡಿ ಕೊಡದಿದ್ದರೆ ಕೊಲ್ಲದೆ ಬಿಡುವುದಿಲ್ಲ ಎಂದು ಬೆದರಿಸಿ ವ್ಯಕ್ತಿಯೋವ೯ ಕತ್ತಿಯಿಂದ ಕಡಿಯಲು ಯತ್ನಿಸಿದ ಘಟನೆ ಜೂ.11 ರಂದುಲಾಯಿಲದಲ್ಲಿ ನಡೆದಿದೆ.
ಲಾಯಿಲ ಹಳೆಪೇಟೆ ವಿವೇಕಾನಂದ ನಗರ ನಿವಾಸಿ ಸೋಮನಾಥ ಕುಲಾಲ್ ಎಂಬವರ ಎಡ ಕೈ ಅಂಗೈಗೆ ಸೀಲಿದ ಗಾಯವಾಗಿದ್ದು ಪೊಲೀಸರಿಗೆ ದೂರು ನೀಡಿದ್ದಾರೆ.
ಜೂ.11 ರಂದು ಬೆಳಿಗ್ಗೆ 10.30 ಕ್ಕೆ ಕಡಬ ತಾಲೂಕು ಕೈಕಂಬ ನಿವಾಸಿ ದಿನೇಶ ಕುಲಾಲ್ ಎಂಬಾತ ಕೆಎ51ಇಜೆ174 ನೇ ಮೋಟಾರ್ ಸೈಕಲ್ಲಿನಲ್ಲಿ ಲಾಯಿಲಸೋಮನಾಥರ ಮನೆಯ ಬಳಿ ಬಂದು ಏಕಾಏಕಿ ಸಿಟೌಟ್‌ ಗೆ ನುಗ್ಗಿ ಅಲ್ಲಿದ್ದ ಅವರ ಮನೆಯವರನ್ನು ಕಂಡು ನನಗೆ ನಿನ್ನ ಮಗಳನ್ನು ಮದುವೆ ಮಾಡಿಕೊಡದಿದ್ದರೆ, ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ” ಎಂದು ಅವಾಚ್ಯ ಶಬ್ದಗಳಿಂದ ಬೈದು ಕೈಯಲ್ಲಿದ್ದ ಬ್ಯಾಗಿನಿಂದ ಮಂಡೆಕತ್ತಿಯೊಂದನ್ನು ತೆಗೆದು ಸೋಮನಾಥರ ತಲೆಗೆ ಕಡಿಯುವ ಸಮಯ ಅವರು ತಡೆದರೆನ್ನಲಾಗಿದೆ. ವೇಳೆ ಅವರ ಎಡಕೈಯ ಅಂಗೈಗೆ ಸೀಳಿದ ರಕ್ತಗಾಯವಾಗಿದೆ. ಅಲ್ಲದೇ ಬಿಡಿಸಲು ಬಂದ ಪಕ್ಕದ ಮನೆಯ ಮಹೇಶರವರಿಗೆ ಕೈಗೂ ಕತ್ತಿ ತಾಗಿ ಗಾಯವಾಗಿದೆ. ಆ ಸಮಯ ಬೊಬ್ಬೆ ಕೇಳಿ ಇತರರು ಬರುವುದನ್ನು ಕಂಡು ಆರೋಪಿಯು “ನಿಮ್ಮನ್ನು ಕೊಲ್ಲದೇ ಬಿಡುವುದಿಲ್ಲ” ಎಂಬುವುದಾಗಿ ಜೀವಬೆದರಿಕೆಯೊಡ್ಡಿ ಪರಾರಿಯಾಗಿರುವುದಾಗಿ ಪೊಲೀಸ್ ರಿಗೆ ನೀಡಿದ ದೂರಿನಲ್ಲಿ ಆರೋಸಿದ್ದಾರೆ.

ನಿಮ್ಮದೊಂದು ಉತ್ತರ