ಲಾಯಿಲ: ಇಲ್ಲಿಯ ಬಜಕ್ರೆಸಾಲು ನಿವಾಸಿ, ನಿವೃತ್ತ ಕಾಂಪೌಂಡರ್ ಜಿನ್ನಪ್ಪ ಹೆಗ್ಡೆ( 84.ವ) ರವರು ಎ.15 ರಂದು ರಾತ್ರಿ ನಿಧನರಾದರು.
ಇವರು ಹಲವಾರು ವರ್ಷಗಳ ಕಾಲ ಸರಕಾರಿ ಆಸ್ಪತ್ರೆಯ ಕಾಂಪೌಂಡರರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಮಾಳವ ಯಾನೆ ಮಲ್ಲವ ಸಮಾಜಭ್ಯುದಯ ಸಂಘದ ಮಾಜಿ ಅಧ್ಯಕ್ಷರಾಗಿದ್ದ ಇವರು ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಮೃತರು ಪುತ್ರರಾದ ಗ್ರಾಮಕರಣಿಕ ರೂಪೇಶ್, ಉಮೇಶ್, ಪುತ್ರಿ ಉಷಾ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.