ತಾಲೂಕು ಸುದ್ದಿ

ನಿವೃತ್ತ ಪೊಲೀಸ್ ಕಾನ್ಸ್ ಟೇಬಲ್, ಜಿ.ಎಸ್. ಬಿ ಸಮಾಜದ ಹಿರಿಯರಾದ ಬಿ. ಮುರಳೀಧರ ಶೆಣೈ ನಿಧನ

ಗುರುವಾಯನಕೆರೆ: ಪೊಲೀಸ್ ಇಲಾಖೆಯಲ್ಲಿ ಹಲವಾರು ವಷ೯ ಪೊಲೀಸ್ ಕಾನ್ಸ್ ಟೇಬಲ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ,
ಜಿ.ಎಸ್. ಬಿ ಸಮಾಜದ ಹಿರಿಯರಾದ
ಬಿ. ಮುರಳೀಧರ ಶೆಣೈ (75 ವ)
ವಯೋಸಹಜವಾಗಿ ಮಾ.25ರಂದು ನಿಧನರಾದರು.
ಇವರು 42 ವರುರ್ಷಗಳ ಕಾಲ ಪೋಲೀಸ್ ಇಲಾಖೆಯಲ್ಲಿ ಕತ೯ವ್ಯ ನಿವ೯ವಹಿಸಿದ್ದರು. ಮಂಗಳೂರು, ಸುಳ್ಯ, ಕಾರ್ಕಾಳ, ವೇಣೂರು, ಬೆಳ್ತಂಗಡಿ ಮುಂತಾದ ಕಡೆಗಳಲ್ಲಿ ಪೋಲೀಸ್ ಕಾನ್ಸ್ ಟೇಬಲ್  ಹಾಗೂ ಹೆಡ್ ಕಾನ್ಸ್ಟೇಬಲ್
ಆಗಿ ಕರ್ತವ್ಯ ನಿರ್ವಹಿಸಿ, ಕೊನೆಗೆ ಸುಳ್ಯದಲ್ಲಿ ನಿವೃತ್ತಿಯಾದರು.
ಮೃತರು ಪತ್ನಿ ವೃಂದಾ ಹಾಗೂ
ಮಕ್ಕಳಾದ ಜಗದೀಶ್ ಶೆಣೈ ಮತ್ತು
ಗುರುಪಸಾದ್ ಶೆಣೈ, ಮತ್ತು ಬಂಧು-ವಗ೯ರವರನ್ನುಅಗಲಿದ್ದಾರೆ.

ನಿಮ್ಮದೊಂದು ಉತ್ತರ