ಬೆಳ್ತಂಗಡಿ: ಇತ್ತೀಚೆಗೆ ಕೊರೊನಾದಿಂದಾಗಿ ಭಾರೀ ಸದ್ದುಮಾಡಿರುವ ಬೆಳ್ತಂಗಡಿ ನಗರದ ಸುಧೆ
ಮುಗೇರುಪ.ಜಾತಿ ಕಾಲನಿನಲ್ಲಿಹಲವಾರುಜನರು ಕೊರೊನಾಬಾದಿತರಾಗಿಈ ಪ್ರದೇಶವನ್ನು ಕೆಲವು ದಿನಗಳಿಂದ ಕಂಟೈನ್ಮೆಂಟ್ ವಲಯ ಎಂಬುದಾಗಿ ಘೋಷಣೆ ಮಾಡಿರುವುದರಿಂದ ಇಲ್ಲಿನಜನರಿಗೆಮನೆಯಿಂದ ಹೊರಗಡೆ ಬಾರದಂತೆ ನಗರ ಪಂಚಾಯತ್ ಮತ್ತು ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದ್ದಾರೆ.
ಇದರಿಂದಾಗಿ ಇಲ್ಲಿನ ಜನರು ಕೂಲಿ ಕೆಲಸವ
ನ್ನೇ ನಂಬಿ ಬದುಕುತ್ತಿದ್ದ ಇಲ್ಲಿನ ನಿವಾಸಿಗಳಿಗೆ ಬದುಕು ಸಾಗಿಸುವರೇ ಕಷ್ಟವಾಗುತ್ತಿದೆ,ಒಂದೆಡೆ ಸೀಲ್ ಡೌನ್ ಘೋಷಣೆ
ಮಾಡಿದ ನಗರ ಪಂಚಾಯತ್ ಆಗಲೀ ಸರ್ಕಾರದ ವತಿಯಿಂದಾಗಲಿ ಯಾವುದೇ ರೀತಿಯ ದಿನನಿತ್ಯದ ಆಹಾರ ಪದಾರ್ಥಗಳನ್ನು ಪೂರೈಕೆ ಮಾಡದೇ ಇರುವುದನ್ನು ಮನಗಂಡು ಇಲ್ಲಿನ ಜನರ ಭವನೆಯನ್ನು ಅರ್ಥೈಸಿಕೊಂಡ ಇಲ್ಲಿನ ನಗರಪಂಚಾಯತ್ ಸದಸ್ಯರಾದ ಜಗದೀಶ್ ಡಿ. ರವರು ಸ್ಥಳೀಯ ದಾನಿಗಳನ್ನು ಭೇಟಿಮಾಡಿ ಕಂಟೋನ್ಮೆಂಟ್ ವಲಯದ ಜನರಿಗೆ ಸಹಕಾರ ನೀಡುವಂತೆ ಮನವಿ ಮಾಡಿರುವ ಮೇರೆಗೆಸೈಂಟ್ ಲಾರೆನ್ಸ್ ಚರ್ಚ್ ಉದಯನಗರ ಬೆಳ್ತಂಗಡಿ ಇಲ್ಲಿನ ಸಮಾನ ಮನಸ್ಕರಾದ ಎ.ಜೆ ಅಜೇಯ್ ಮಟ್ಲ..
ಏಸುದಾಸ್ ಆನ್ ಸಿಲ್ಕ್ ಬೆಳ್ತಂಗಡಿ , ಕರಾವಳಿ ಚಿಕನ್ ಮಾಲಕರಾದ ತೋಮಸ್ ,
ಪ್ರಜೇಶ್ ವಿ ಎಫ್ ಮಸ್ಕತ್ , ಪೋಳಿ ಜೋಸೆಫ್ ಸೌದಿಅರೇಬಿಯಾ ,.ಅಖಿಲೇಶ್ ಕುವೈಟ್,
ಅಭಿನಿಷ್ ಜೋಸೆಫ್ ಆಫ್ರಿಕಾ,ಶ್ಯಾಮ್ ವೆಲ್ ಕಾಶಿಬೆಟ್ಟು ಕೆನಡಾ , . ಮುಂತಾದವರು ಮೇ 13 ಗುರುವಾರ ಸಂಜೆ ಕಂಟೋನ್ಮೆಂಟ್ ವಲಯವಾದ ಬೆಳ್ತಂಗಡಿ ನಗರದ
ಸುಧೆಮುಗೇರು ಪ್ರದೇಶಕ್ಕೆ ಬಂದು ಅಲ್ಲಿನ ಪ.ಜಾತಿ ಸೇರಿದಂತೆ ಎಲ್ಲಾ 82 ಮನೆಗಳಿಗೆ ಅಕ್ಕಿಹಾಗೂ ಇತರ ದಿನಸಿ ಸಾಮಾಗ್ರಿಗಳ ಆಹಾರದ ಕಿಟ್ ಗಳನ್ನು ವಿತರಿಸಿದರು.
ಈ ಸಂಧರ್ಭದಲ್ಲಿ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ಮುಖಂಡರು ಹಾಗೂ ಕಾಂಗ್ರೆಸ್ ಎಸ್ಸಿ ಘಟಕದ ತಾಲೂಕು ಅಧ್ಯಕ್ಷರಾದ ಬಿ.ಕೆ.ವಸಂತ್ ಬೆಳ್ತಂಗಡಿ ಇವರು ಉಪಸ್ಥಿತರಿದ್ದು ಕಿಟ್ ವಿತರಣೆಗೆ ಸಂಪೂರ್ಣ ಸಹಕಾರ ನೀಡಿದರು.
ಈ ಸಂಧರ್ಭದಲ್ಲಿ ಸ್ಥಳೀಯ ದಲಿತ ಮುಖಂಡರುಗಳಾದ ಜನಾರ್ದನ ಸುಧೆಮುಗೇರು,ಉಮೇಶ್ ಮೆಸ್ಕಾಂ ,
ಸುರೇಶ್ ಸುಧೆಮುಗೇರು,ಲಿಂಗಪ್ಪ ಸುಧೆಮುಗೇರು,ರಾಜೇಶ್ ಸುಧೆಮುಗೇರು.
ಅಶೋಕ್ ಸುಧೆಮುಗೇರು.,ನೀಲಯ್ಯ ಸುಧೆಮುಗೇರು. ಕಿಶೋರ್ ಕೋಡಿಸಭೆ ಮುಂತಾದವರು ಉಪಸ್ಥಿತರಿದ್ದು
ಆಹಾರ ಸಾಮಾಗ್ರಿಗಳ ವಿತರಣೆಯಲ್ಲಿ ಸಹಕಾರ ನೀಡಿದರು.
ಈ ಸಂಧರ್ಭದಲ್ಲಿ ಕೊಡುಗೈ ದಾನಿಗಳಿಗೆ ನಗರ ಪಂಚಾಯತ್ 8 ನೇ ವಾರ್ಡಿನ ಸದಸ್ಯರಾದ ಜಗದೀಶ್ ಡಿ ಯವರು ಧನ್ಯವಾದ ನೀಡಿದರು.
ಹಣ್ಣು-ಹಂಪಲು ವಿತರಣೆ:
ಲಾಯಿಲ: ಇಲ್ಲಿನ ಟಿಬಿ ಕಾಸ್ ರಸ್ತೆಯಲ್ಲಿರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೋವಿಡ್ ಸೆಂಟರ್ ಕೇಂದ್ರದಲ್ಲಿ ಕೋವಿಡ್ ಬಾದಿತರು ಚಿಕಿತ್ಸೆ ಪಡೆಯುತ್ತಿದ್ದು ಇಲ್ಲಿಗೆ ಮೇ 12 ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ದ ನಾಯಕ ಕಾಂಗ್ರೆಸ್ ಎಸ್ಸಿ ಘಟಕದ ತಾಲೂಕು ಅಧ್ಯಕ್ಷರಾದ ಬಿ.ಕೆ.ವಸಂತ್ ಬೆಳ್ತಂಗಡಿ, ಹಾಗೂ ಬೆಳ್ತಂಗಡಿ ನಗರ ಪಂಚಾಯತ್ 8 ನೇ ವಾರ್ಡಿನ ಸದಸ್ಯರು ಕಾಂಗ್ರೆಸ್ ಪಕ್ಷದ ಡಿಸಿಸಿ ಸದಸ್ಯರಾದ ಜಗದೀಶ್ ಡಿ ಯವರು ಕೋವಿಡ್ ಸೆಂಟರ್ ಗೆ ಭೇಟಿ ನೀಡಿ ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರ ಯೋಗಕ್ಷೇಮ ವಿಚಾರಿಸಿದರು.
ಈ ಸಂಧರ್ಭದಲ್ಲಿ ಕೋವಿಡ್ ಸೆಂಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರೆಲ್ಲರೂ ಮಾತನಾಡುತ್ತಾ .
” ನಮಗೆ ಉತ್ತಮವಾದ ಚಿಕಿತ್ಸೆ ನೀಡಲಾಗುತ್ತಿದೆ,ನಮಗೆ ಯಾವುದೇ ಸಮಸ್ಯೆ ಇಲ್ಲ,ನಾವೆಲ್ಲರೂಆರೋಗ್ಯವಾಗಿದ್ದೇವೆ,ಊಟೋಪಚಾರ, ಇತರ ಎಲ್ಲಾ ವ್ಯವಸ್ಥೆಗಳು ಉತ್ತಮವಾಗಿದೆ, ಯಾರೆಲ್ಲ ಕೋವಿಡ್ ಬಾದಿತರಾಗಿದ್ದಾರೆ ಅವರೆಲ್ಲರೂ ಇಲ್ಲಿಗೆ ಬಂದು ಚಿಕಿತ್ಸೆ ಪಡೆದುಕೊಳ್ಳುವುದು ಉತ್ತಮ ” ಎಂಬ ಅನಿಸಿಕೆ ವ್ಯಕ್ತಪಡಿಸಿದರು.
ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಲ್ಲರಿಗೂ ವಿವಿಧ ಬಗೆಯ ಹಣ್ಣುಹಂಪಲುಗಳನ್ನು ಮತ್ತು ಬಿಸ್ಕೆಟ್ ಮಂತಾದವುಗಳನ್ನು ವಿತರಿಸಿದ ಬಿ.ಕೆ.ವಸಂತ್ ಮತ್ತು ಜಗದೀಶ್ ಇವರುಗಳು ಕೋವಿಡ್ ಸೆಂಟರ್ ನಲ್ಲಿರುವ ನೀವೆಲ್ಲರೂ ಶೀಘ್ರವಾಗಿ ಗುಣಮುಖವಾಗಲೆಂದು ಹಾರೈಸಿದರು.ಅಲ್ಲದೇ ಕೋವಿಡ್ ಸೆಂಟರ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಮುಖ್ಯಸ್ಥರು, ದಾದಿಯರು ಮತ್ತು ಇತರೆ ಕೆಲಸಗಾರರು ತಮ್ಮ ಜೀವದ ಹಂಗು ತೊರೆದು ಕೋವಿಡ್ ಸೈನಿಕರಂತೆ ಕೆಲಸ ಮಾಡುವ ಇವರ ಮನೋಭಾವ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದರು.