ತಾಲೂಕು ಸುದ್ದಿ

ಬಂದಾರು ನದಿಯಿಂದ ಅಕ್ರಮ ಮರಳು ಸಾಗಾಟ: 6 ಮಂದಿ ವಶ ಸೊತ್ತುಗಳ ಮುಟ್ಟುಗೋಲು

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಬಂದಾರು ಗ್ರಾಮದ ಬಟ್ಲಡ್ಕ ಎಂಬಲ್ಲಿನ ನೇತ್ರಾವತಿ ನದಿಯಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ದೋಣಿಗೆ ಅಳವಡಿಸಲಾದ ಡ್ರಜ್ಜಿಂಗ್ ಯಂತ್ರದ ಸಹಾಯದಿಂದ

ಅಕ್ರಮವಾಗಿ ನದಿಯಿಂದ ಮರಳನ್ನು ತೆಗೆದು ಸಾಗಾಟ ಮಾಡುತ್ತಿದ್ದ ಆರು ಮಂದಿಯನ್ನು ಧಮ೯ಸ್ಥಳ ಪೊಲೀಸರು ವಶಕ್ಕೆ  ಪಡೆದು   ಸೊತ್ತುಗಳನ್ನು ವಶಪಡಿಸಿಕೊಂಡ ಘಟನೆ ಮೇ 12 ರಂದು ವರದಿಯಾಗಿದೆ .ಖಚಿತ ಮಾಹಿತಿ ಮೇಲೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದಾಗ

ಅಕ್ರಮವಾಗಿ ಮರಳು ತೆಗೆಯುತ್ತಿರುವುದು
ಕಂಡುಬಂದಿದ್ದು, ಆರೋಪಿಗಳನ್ನು 6 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಿಸಲಾಗಿ ಮರಳು ತೆಗೆದು ಸಾಗಾಟಕ್ಕೆ ಸಂಬಂಧಿಸಿ ಯಾವುದೇ ದಾಖಲೆ ಪತ್ರಗಳು ಇರಲಿಲ್ಲ.
ಆರೋಪಿಗಳು ಯಾವುದೆ ಪರವಾನಿಗೆ ಇಲ್ಲದೆ

ಮರಳನ್ನು ನದಿಯಿಂದ ಕಳವು ಮಾಡಿ ಅಕ್ರಮವಾಗಿ ಸಾಗಾಟ ಮಾಡುತ್ತಿರುವುದಾಗಿ ಕಂಡು ಬಂದ ಹಿನ್ನೆಲೆಯಲ್ಲಿ ಸೊತ್ತು ಸಮೇತ ಸ್ವಾಧೀನಪಡಿಸಿಕೊಂಡಿದ್ದುಸ್ವಾಧೀನಪಡಿಸಿಕೊಂಡಿರುವ ಸೊತ್ತುಗಳ ಅಂದಾಜು ಮೌಲ್ಯ ರೂ. 30 ಲಕ್ಷದ 36 ಸಾವಿರ ಆಗಬಹುದುದೆಂದು ಅಂದಾಜಿಸಲಾಗಿದೆ.
ಸಂದೇಶ, ಜಯಂತ, ರಕ್ಷಿತ್, ಅವಿನಾಶ್, ಕೇಶವ, ಶರೀಫ್ ಎಂಬವರನ್ನು ಮೇಲೇ  ಪ್ರಕರಣ ದಾಖಲಿಸಿಕೊಳ್ಳಲಿಗಿದೆ. ಸ್ಥಳದಿಂದ ದೋಣಿಗೆ ಅಳವಡಿಸಿದ ಡ್ರಜ್ಜಿಂಗ್ ಮಿಷನ್-1, ಎಸ್ಕಾರ್ಟ್ ಕಂಪನಿಯ ನೊಂದಣಿಯಾಗದ ಕ್ರೇನ್-1,
ಕೆಎ 19 ಎಡಿ 0276 ಟಾಟಾ ಕಂಪನಿಯ ಟೋಯಿಂಗ್ ವಾಹನ-1, ಕೆಎ 21 ಪಿ 1503 ನೇ ಮಾರುತಿ ಕಂಪನಿಯ ಓಮಿನಿ – 1,
ಕೆಎ 21 ವೈ 9488 ನೇ ಮೆಸ್ಟ್ರೋ ದ್ವಿಚಕ್ರ ವಾಹನ -1, ಕೆಎ 21 ಎಸ್ 6663 ಆಕ್ಟಿವಾ ಹೋಂಡಾ – 1, ಕೆಎ 21 ಎಸ್ 1549 ನೇ ಟಿವಿ ಎಸ್ ಅಪಾಚಿ ಮೋಟಾರು ಸೈಕಲ್ -1, ಸುಮಾರು 20 ಟನ್ ಗಳಷ್ಟು ಮರಳನ್ನು ವಶಪಡಿಸಿಕೊಳ್ಳಲಾಗಿದೆ
ಧಮ೯ಸ್ಥಳ ಠಾಣಾ ಎಸ್. ಐ ಪವನ್ ನಾಯಕ್ ಅವರು ಕೇಸು ದಾಖಲಿಸಿಕೊಂಡಿದ್ದು, ಎಸ್.ಐ ಚಂದ್ರಶೇಖರ್ ತನಿಖೆ ನಡೆಸುತ್ತಿದ್ದಾರೆ.

ನಿಮ್ಮದೊಂದು ಉತ್ತರ