ಇಳಂತಿಲ : ಪ್ರಗತಿ ಬಂಧು ಸ್ವ – ಸಹಾಯ ಸಂಘಗಳ ಒಕ್ಕೂಟ ಇಳಂತಿಲ, ಜನಜಾಗೃತಿ ಗ್ರಾಮ ಸಮಿತಿ ಇಳಂತಿಲ ವಿಭಾಗ, ಶ್ರೀ ಬಾಲಸುಬ್ರಮಣ್ಯ ದೇವಸ್ಥಾನ ಇಚ್ಚೂರು, ಇದರ ವತಿಯಿಂದ, ಶ್ರೀ ಇಚ್ಚೂರು ಬಾಲಸುಬ್ರಮಣ್ಯ ದೇವಸ್ಥಾನ ದಲ್ಲಿ ಗ್ರಾಮ ಸುಭಿಕ್ಷಾ ಕಾರ್ಯಕ್ರಮ ನ.14ರಂದು ನಡೆಯಿತು.
ಈ ಕಾರ್ಯಕ್ರಮದಲ್ಲಿ ಗ್ರಾಮ ಸಮಿತಿ ಅಧ್ಯಕ್ಷರಾದ ಶಂಕರ್ ಭಟ್ ಒಕ್ಕೂಟ ಅಧ್ಯಕ್ಷರಾದ ಬಾಲಕೃಷ್ಣ ಪೂಜಾರಿ ಮತ್ತು ಪದಾಧಿಕಾರಿಗಳು, ಜನ ಜಾಗೃತಿ ಶಿಬಿರಾಧಿಕಾರಿ ದಿವಾಕರ್ ಪೂಜಾರಿ, ಶ್ರೀ ಗುರು ನವಜೀವನ ಸಮಿತಿ ಸದಸ್ಯರು, ಸೇವಾಪ್ರತಿನಿಧಿ
ಶ್ರೀಮತಿ ವಸಂತಿ, ವಲಯ ಮೇಲ್ವಿಚಾರಕರು ಭಾಗವಹಿಸಿದ್ದರು.
ನೇಜಿ ಕಾರು : ಡಿಜಿಟಲ್ ಸೇವಾ ಕೇಂದ್ರ ಉದ್ಘಾಟನೆ
ನೇಜಿಕಾರು ಕಾರ್ಯಕ್ಷೇತ್ರದಲ್ಲಿ ನೂತನವಾಗಿ ಡಿಜಿಟಲ್ ಸೇವಾಕೇಂದ್ರದ ಉದ್ಘಾಟನೆ ನ.16ರಂದು ನಡೆಯಿತು, ಕಾರ್ಯಕ್ರಮದಲ್ಲಿ ಶ್ರೀ. ಕ್ಷೇ. ಧ. ಗ್ರಾ. ಯೋಜನೆ ತಾಲೂಕು ಯೋಜನಾಧಿಕಾರಿ ಯಶವಂತ್ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು, ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿ ಅಧ್ಯಕ್ಷರಾದ ಕುಕ್ಕಪ್ಪ ಗೌಡ, ಹಾಗೂ ಒಕ್ಕೂಟ ಉಪಾಧ್ಯಕ್ಷರಾದ ಲೋಕನಾಥ್ ರವರು ಶುಭ ಹಾರೈಸಿದರು, ವಲಯ ಮೇಲ್ವಿಚಾರಕರಾದ ಶ್ರೀ ಮತಿ ಪ್ರೇಮ, ಗ್ರಾಮ ಪಂಚಾಯತ್ ಸದಸ್ಯರಾದ ರಮೇಶ್, ಒಕ್ಕೂಟ ಪದಾಧಿಕಾರಿಗಳು, ಸೇವಾಪ್ರತಿನಿಧಿ ಜಾನಕಿ, ಹಾಗೂ ಸುಜಾತಾ, ಉಪಸ್ಥಿತರಿದ್ದರು.